ಪ್ರೀತಿಸುವ ನೆಪ ಹಾಗೂ ಹಣದ ಆಸೆ ತೋರಿಸುವ ಮೂಲಕ ಯುವತಿಯರೊಂದಿಗೆ ರಾಸಲೀಲೆ ಆಡಿ, ವಿಡಿಯೋ ಸೆರೆ ಹಿಡಿದು, ಬೆದರಿಕೆ ಹಾಕುತ್ತಿದ್ದ ವಿಕೃತ ಕಾಮಿಯನ್ನು ಹುಬ್ಬಳ್ಳಿಯ ಕಸಬಾಪೇಟ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಶರಾವತಿನಗರದ ಕೆಇಬಿ ಲೇಔಟ್ ನಿವಾಸಿ ಹಾಗೂ ಝರಾಕ್ಸ್ ಅಂಗಡಿ ಮಾಲೀಕ ಅಶ್ವಾಕ್ ಜೋಗನ್ ಕೊಪ್ಪ (38) ಎಂಬಾತನೇ ಬಂಧಿತ ಆರೋಪಿ. ಈತ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಝರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ಇಟ್ಟುಕೊಂಡಿದ್ದಾನೆ. ಅಂಗಡಿಗೆ ಬರುವ ಬಡ ಯುವತಿಯರು ಸೇರಿದಂತೆ ಅಪ್ರಾಪ್ತ ಹೆಣ್ಣುಮಕ್ಕಳನ್ನು ಹಣದ ಆಸೆ ತೋರಿಸಿ, ಪುಸಲಾಯಿಸಿ ಕಾಮದಾಟಕ್ಕೆ ಬಳಸಿಕೊಳ್ಳುತ್ತಿದ್ದ ಅಷ್ಟೇ ಅಲ್ಲದೆ ವಿಡಿಯೋ ಕಾಲ್ ನಲ್ಲಿ ಹೆಣ್ಣು ಮಕ್ಕಳ ಬಟ್ಟೆ ಬಿಚ್ಚಿಸಿ, ನಗ್ನ ಚಿತ್ರ ರೆಕಾರ್ಡ್ ಮಾಡಿಕೊಂಡು ತನ್ನ ಕಾಮದಾಸೇ ತಿರಿಸುಕೊಳ್ಳುತ್ತಿದ್ದ ಇನ್ನೂ ಅಪ್ರಾಪ್ತ ಬಾಲಕಿಯ ಪೋಷಕರ ದೂರಿನ ಮೇರೆಗೆ ಝರಾಕ್ಸ್ ಅಂಗಡಿ ಮಾಲೀಕನನ್ನ ಕಸಬಾಪೇಟ್ ಠಾಣೆಯ ಇನ್ಸೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಠಾಣೆಗೆ ಕರೆತಂದು ಪೋಲಿಸ್ ಲಾಠಿ ರುಚಿ ತೋರಿಸಿದ್ದಾರೆ.ಆಗ ಸೈಕೋ ಕಾಮಿ ಮೊಬೈಲ್‌ನಲ್ಲಿ ಪೊಲೀಸರಿಗೆ ಹತ್ತಕ್ಕೂ ಹೆಚ್ಚು ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋಗಳು ಸಿಕ್ಕಿದ್ದು ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಒಟ್ನನಲ್ಲಿ ಕಸಬಾಪೇಟ್ ಪೊಲೀಸರ ಕಾರ್ಯಚರಣೆಗೆ ಝರಾಕ್ಸ್ ಅಂಗಡಿ ಮಾಲೀಕನ ಅಸಲಿ ಮುಖ ಹೊರ ಬಿದ್ದಿದ್ದು, ಅದೆಷ್ಟೋ ಬಡ ಹೆಣ್ಣು ಮಕ್ಕಳ ಜೀವ ಉಳಿದಂತಾಗಿದ್ದು ಸುಳ್ಳಲ್ಲ.ಇನ್ನೂ ಕಸಬಾ ಪೋಲಿಸ್ ಠಾಣಾ ಪೋಲಿಸರ ಕಾರ್ಯ ವೈಖರಿಗೆ ಕಮೀಷನರ್ ಎನ್.ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.