Belagavi

ಬೆಳಗಾವಿಗೆ ಆಗಮಿಸಿದ ಅಕ್ಕಲಕೋಟ ಶ್ರೀ ಸ್ವಾಮಿ ಸಮರ್ಥರ ಪಾದುಕೆಗಳು…

Share

ಶ್ರೀ ಕ್ಷೇತ್ರ ಅಕ್ಕಲಕೋಟನಿಂದ ಅವಧೂತ ಚಿಂತನ ಅಕ್ಕಲಕೋಟ ಶ್ರೀ ಸ್ವಾಮಿ ಸಮರ್ಥರ ಪಾದುಕೆಗಳು ಬೆಳಗಾವಿಗೆ ಆಗಮಿಸಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಬೆಳಗಾವಿಯ ಕಡೋಲಕರ ಗಲ್ಲಿಗೆ ಶ್ರೀ ಕ್ಷೇತ್ರ ಅಕ್ಕಲಕೋಟನಿಂದ ಅವಧೂತ ಚಿಂತನ ಅಕ್ಕಲಕೋಟ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅಸಂಖ್ಯ ಸ್ವಾಮಿ ಭಕ್ತರು ಕಡೋಲಕರ ಗಲ್ಲಿಗೆ ಭೇಟಿ ನೀಡಿ ಸ್ವಾಮಿ ಪಾದುಕೆಗಳ ದರ್ಶನ ಪಡೆಯುತ್ತಿದ್ದಾರೆ. ಪ್ರತಿವರ್ಷ ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ಮೊದಲ ಇಲ್ಲವೇ ಎರಡನೇ ವಾರದಲ್ಲಿ ಶ್ರೀ ಸ್ವಾಮಿ ಸಮರ್ಥರ ಪಾದುಕೆಗಳು ಬೆಳಗಾವಿಗೆ ಆಗಮಿಸಿ ಕಡೋಲಕರ ಗಲ್ಲಿಯಲ್ಲಿ ಇರುತ್ತವೆ. ಈ ನಿಮಿತ್ಯ ಬೆಳಗಿನ ಜಾವ ಸ್ವಾಮಿಗೆ ಅಭಿಷೇಕ, ಅರ್ಚನೆ ಇನ್ನುಳಿದ ಸೇವೆಗಳನ್ನು ನಡೆಸಲಾಗುತ್ತದೆ. ಮಹಾ ಆರತಿ ಬಳಿಕ ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ರಾತ್ರಿ ಮಹಾಪ್ರಸಾದವನ್ನು ಆಯೋಜಿಸಲಾಗುತ್ತದೆ. ಭಕ್ತಾಧಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅರ್ಚಕರು ಕರೆ ನೀಡಿದರು. ಬೈಟ್

ಈ ವೇಳೆ ಅಸಂಖ್ಯ ಭಕ್ತರು ಶ್ರೀ ಸ್ವಾಮಿ ಸಮರ್ಥರ ಪಾದುಕೆಯ ದರ್ಶನವನ್ನು ಪಡೆದುಕೊಂಡು ಕೃತಾರ್ಥರಾದರು.

Tags:

error: Content is protected !!