Uncategorized

ನಮ್ಮದು ಹೆದರುವ ಜಾಯಮಾನವಲ್ಲ…ಹೋರಾಡುವ ಜಾಯಮಾನ

Share

ಈ ದೇಶದ ಸಂವಿಧಾನ ಕೇವಲ ಒಂದು ಪುಸ್ತಕವಲ್ಲ. ಇದು ದೇಶದ ಪ್ರತಿಯೊಬ್ಬ ನಾಗರೀಕನ ಸುರಕ್ಷಾ ಕವಚವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ದೇಶದ ಜನರು ಪ್ರಜಾಪ್ರಭುತ್ವದ ಹಕ್ಕನ್ನು ಕಸಿದುಕೊಳ್ಳುತ್ತಿರುವ ಈ ಬಿಜೆಪಿ ವಿರುದ್ಧ ಧೈರ್ಯದಿಂದ ಮುನ್ನುಗಿ ಹೋರಾಡಿ ತಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಹೇಳಿದರು.

1924 ರಲ್ಲಿ ಮಹಾತ್ಮಾ ಗಾಂಧಿಜೀಯವರ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಜೈ ಬಾಪೂ ಜೈ ಭೀಮ್ ಮತ್ತು ಜೈ ಸಂವಿಧಾನ ರ್ಯಾಲಿ ಸಮಾವೇಶ ಇಂದು ಬೆಳಗಾವಿಯ ಸಿ.ಪಿ.ಎಡ್. ಮೈದಾನದಲ್ಲಿ ನಡೆಯಿತು. ಮೊದಲಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತ ಗಣ್ಯರನ್ನು ಸ್ವಾಗತಿಸಿ , ವಿಶ್ವಕ್ಕೆ ಅಹಿಂಸೆ, ಶಾಂತಿ, ಸಹಬಾಳ್ವೆಯ ಸಂದೇಶವನ್ನು ಮಹಾತ್ಮಾ ಗಾಂಧಿಜೀಯವರು ಈ ದೇಶಕ್ಕೆ ನೀಡಿದ್ದು ಅವರ ನೀತಿ ಇಂದಿಗೂ ಪ್ರಸ್ತುತ. ಸಂಕ್ರಾಂತಿ ಎಂದರೇ ಹೊಸ ಹುರುಪು ಹೊಸ ಉತ್ಸಾಹ. 1924 ರ ಕಾಂಗ್ರೆಸ್ ಅಧಿವೇಶನ ಸ್ವಾತಂತ್ರ್ಯ ಹೋರಾಟದ ಹೊಸ ಹುರುಪು. ಗಾಂಧಿಜೀಯವರು ದೇಶಕ್ಕೆ ಸ್ವಾತಂತ್ರ್ಯವನ್ನು ಕೊಟ್ಟರು.. ಡಾ. ಬಾಬಾಸಾಹೇಬ್ ಅಂಬೇಡ್ಕರರು ಸಂವಿಧಾನವನ್ನು ನೀಡಿದರು. ಗಾಂಧಿ ಭಾರತವೆಂದರೇ, ಸ್ವಾಭಿಮಾನ, ಏಕತೆ, ಸಾಮರಸ್ಯ, ಜಾತ್ಯಾತೀತ , ಸರ್ವೋದಯದ ಭಾರತ. ಕ್ರಾಂತಿಕಾರಿಯನ್ನು ಕೊಲ್ಲಬಹುದು ಆದರೇ ಕ್ರಾಂತಿಯನ್ನು ಕೊಲ್ಲಲಾಗದು ಎಂದು ಗಾಂಧಿಜೀ ಹೇಳಿದ್ದಾರೆ. ಸಂವಿಧಾನವೇ ನಮ್ಮ ತಂದೆ-ತಾಯಿ ಸಂವಿಧಾನವೇ ನಮ್ಮ ಬಂಧು ಬಳಗ. ದುಷ್ಟರಿಂದ ಗಾಂಧಿಜೀಯವರ ಚಿಂತನೆಯನ್ನು ಉಳಿಸಬೇಕಾಗಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು 1924 ರಲ್ಲಿ ಮಹಾತ್ಮಾ ಗಾಂಧಿಜೀಯವರು ಅಲಂಕರಿಸಿದ ಸ್ಥಾನಕ್ಕೆ ಇಂದು ತಮ್ಮೆಲ್ಲರ ಸಹಕಾರದಿಂದ ಕರ್ನಾಟಕದವರಾದ ನನ್ನನ್ನು ಆಯ್ಕೆ ಮಾಡಿರುವುದು ನನ್ನ ಸೌಭಾಗ್ಯ ಎಂದರು. ಡಿಸೆಂಬರ್ 26 ರಂದು ನವ ಸತ್ಯಾಗ್ರಹ ಬೈಠಕ್ ಎಂಬ ಹೊಸ ಸಂಕಲ್ಪವನ್ನು ತೊಡಲಾಗಿದೆ ಎಂದರು. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಪಾತ್ರವೆನಿದೆ. ದೇಶಕ್ಕೆ ಮಡಿದವರು ಕಾಂಗ್ರೆಸ್ಸಿನವರು. ರಾಮಲೀಲಾ ಮೈದಾನದಲ್ಲಿ ಸಂವಿಧಾನವನ್ನು ಸುಟ್ಟವರು ಬಿಜೆಪಿಯವರು. ಈ ದೇಶದ ಸಂವಿಧಾನ, ದೇಶದ ಧ್ವಜವನ್ನು ಒಪ್ಪದ ಬಿಜೆಪಿ ಮತ್ತು ಸಂಘಗಳು ಅಂಬೇಡ್ಕರನ್ನು ಮತ್ತು ಸಂವಿದಾನವನ್ನು ಸದಾ ಅವಮಾನಿಸುತ್ತ ಬಂದಿವೆ. ದೇಶವನ್ನು ಜಾತಿ –ಧರ್ಮದ ಆಧಾರದ ಮೇಲೆ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೇ ಕಾಂಗ್ರೆಸನ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆಯ ಮೂಲಕ ಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಗೃಹ ಸಚಿವ ಅಮೀತ್ ಶಾಹ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು. ನಮ್ಮನ್ನು ಕೆಣಕಬೇಡಿ, ಕೆಣಕಿದರೇ ಸುಟ್ಟು ಬಿಡುತ್ತಿರಿ ಎಂದರು.

ಇನ್ನು ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಅವರು ಇದು ಬೆಳಗಾವಿಯ ಪುಣ್ಯ ಭೂಮಿಯ ಮೇಲೆ ಭಾರತದ ದೇಶದ ಎಲ್ಲರ ಋಣವಿದೆ. ಬೆಳಗಾವಿ ಕಾಂಗ್ರೆಸ್ಸಿಗರ ಪುಣ್ಯಭೂಮಿಯಾಗಿದೆ. ದೇಶದ ಸ್ವಾತಂತ್ರ್ಯದ ಕಿಚ್ಚು ಇಲ್ಲಿಂದಲೇ ಹೊತ್ತಿಕೊಂಡಿತು. ಜಗತ್ತಿನಲ್ಲೇ ಭಾರತ ಸತ್ಯ ಅಹಿಂಸೆಯ ಮೂಲಕ ಹೋರಾಡಿ ಸ್ವಾತಂತ್ಯ ಪಡೆದ ದೇಶ. ಈ ದೇಶ ಸಂವಿಧಾನ ಕೇವಲ ಒಂದು ಪುಸ್ತಕವಲ್ಲ. ಈ ಸಂವಿಧಾನವು ದೇಶದ ಜನರ ರಕ್ಷಾಕವಚವಾಗಿದೆ. ಹೆದರುವ ಜಾಯಮಾನ ನಮ್ಮದಲ್ಲ. ಜೈಲಿನಲ್ಲಿ ಕುಳಿತು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರುವವರು ನಾವಲ್ಲ. ಹಲವಾರು ಸರ್ಕಾರಗಳು ಬಂದವು ಹೋದವರು ಆದರೇ ಸಂಸತ್ತಿನಲ್ಲೇ ನಿಂತು ಸಂವಿಧಾನವನ್ನು ಬರೆದ ಅಂಬೇಡ್ಕರರನ್ನು ಯಾರು ಅವಮಾನಿಸಲಿಲ್ಲ. ಆದರೇ ಗೃಹಸಚಿವರಾದ ಅಮೀತ್ ಶಾಹ್ ಈ ಕೆಲಸವನ್ನು ಮಾಡಿದ್ದಾರೆ. ಬಿಜೆಪಿ ಸದಾ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತದೆ. ದೇಶದ ಜನರು ಪ್ರಜಾಪ್ರಭುತ್ವದ ಹಕ್ಕನ್ನು ಕಸಿದುಕೊಳ್ಳುತ್ತಿರುವ ಈ ಬಿಜೆಪಿ ವಿರುದ್ಧ ಧೈರ್ಯದಿಂದ ಮುನ್ನುಗಿ ಹೋರಾಡಿ ತಮ್ಮ ಹಕ್ಕನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ದೇಶದಲ್ಲಿ ಸ್ವಾತಂತ್ರ್ಯ ಸಮಾನತೆ ಮತ್ತು ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ತತ್ವ ಕಾಂಗ್ರೆಸ್ಸಿನದ್ದಾಗಿದೆ. ಮಹಾತ್ಮಾ ಗಾಂಧಿಜೀಯವರು ನೀಡಿದ ಶಾಂತಿ, ಅಹಿಂಸೆ ಮತ್ತು ಸೌಹಾರ್ದತೆಯ ಇಂದಿಗೂ ಪ್ರಸ್ತುತ. ದೇಶದ ಸಾಮರಸ್ಯತೆಗೆ ಅವುಗಳು ಅವಶ್ಯಕ. ಬಿಜೆಪಿಗರು ಸಂವಿಧಾನ ಮತ್ತು ಡಾ. ಅಂಬೇಡ್ಕರರಿಗೆ ಈಗ ಒಮ್ಮಿಂದೊಮ್ಮೆ ಪ್ರೀತಿ ತೋರಿಸಲು ಆರಂಭಿಸುತ್ತಿದ್ದಾರೆ. ಆದರೇ ಅವರು ಯಾವತ್ತೂ ಕೂಡ ಅಂಬೇಡ್ಕರರ ವಿರೋಧಿಗಳು. ದೇಶದ ಸಂವಿಧಾನವನ್ನು ರಕ್ಷಿಸಿದರೇ ಅದು ನಮ್ಮನ್ನು ರಕ್ಷಿಸುತ್ತದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಜಾರಿಯಾದಗಲೂ ಅವರು ವಿರೋಧ ಮಾಡಿದ್ದರು. ಸಂವಿಧಾನದ ಆಶಯಗಳನ್ನು ಜಾರಿ ಮಾಡುವುದೇ ನಮ್ಮ ಸಿದ್ಧಾಂತ ಎಂದರು. ಸಂವಿಧಾನದ ಆಶಯ ಮತ್ತು ಪೀಠಿಕೆಯನ್ನು ಜನರಿಗೆ ತಿಳಿಸುವ ಕೆಲಸಗಳಾಬೇಕು ಎಂದರು.
ವೇದಿಕೆಯ ಮೇಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ್, ಕಾನೂನು ಸಚಿವರಾದ ಎಚ್.ಕೆ. ಪಾಟೀಲ್, ಗೃಹ ಸಚಿವರಾದ ಜಿ. ಪರಮೇಶ್ವರ, ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್, ಸಚಿವರಾದ ಸತೀಶ ಜಾರಕಿಹೊಳಿ, ಸೇರಿದಂತೆ ಕಾಂಗ್ರೆಸನ ವಿವಿಧ ಶಾಸಕರು, ಪದಾಧಿಕಾರಿಗಳು ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!