Belagavi

ಮೈಕ್ರೋ ಫೈನಾನ್ಸಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೇ ‘ಸಾಮೂಹಿಕ ಆತ್ಮಹತ್ಯೆ’ !!!!

Share

ಮೈಕ್ರೋ ಫೈನಾನ್ಸ್ ಮತ್ತು ಮಧ್ಯವರ್ತಿಗಳಿಂದ ಮಹಿಳೆಯರಿಗೆ ಸಾಲ ನೀಡಿ ಮಾಡಲಾಗುತ್ತಿರುವ ಮೋಸದ ತನಿಖೆಯನ್ನು ನಡೆಸಬೇಕೆಂದು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಎದುರು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ನೇತೃತ್ವದಲ್ಲಿ ಕಿರುಕುಳಕ್ಕೊಳಗಾದ ಮಹಿಳೆಯರು ಪ್ರತಿಭಟನೆಯನ್ನು ನಡೆಸಿದರು. ಮೈಕ್ರೋ ಫೈನಾನ್ಸಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಎಚ್ಚರಿಕೆಯನ್ನು ನೀಡಿದರು.

ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ನೇತೃತ್ವದಲ್ಲಿ ಮೈಕ್ರೋ ಫೈನಾನ್ಸಗಳ ಕಿರುಕುಳಕ್ಕೊಳಗಾದ ಮಹಿಳೆಯರು ಪ್ರತಿಭಟನೆಯನ್ನು ನಡೆಸಿದರು. ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಹಿಳೆಯರು ತಮಗೆ ಸಾಲ ನೀಡುವುದಾಗಿ ಮಧ್ಯವರ್ತಿಗಳು ಮತ್ತು ಮೈಕ್ರೋ ಫೈನಾನ್ಸಿನವರು ಮೋಸ ಮಾಡಿದ್ದಾರೆ. ಮನೆಯಲ್ಲಿ ಜಗಳಗಳು ಉಂಟಾಗುತ್ತಿವೆ. ಅಲ್ಲದೇ ಮನೆಗೆ ನುಗ್ಗಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು. ಅಲ್ಲದೇ ಕಿರುಕುಳ ನೀಡುವ ಫೈನಾನ್ಸಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಾಲ್ಮೀಕಿ ಮೈಕ್ರೋ ಫೈನಾನ್ಸನವರು ಮಹಿಳೆಯರಿಗೆ ಮಧ್ಯವರ್ತಿಗಳ ಮೂಲಕ ಸಾಲವನ್ನು ನೀಡಿದ್ದಾರೆ. ಸಾಲದಲ್ಲಿನ ಹೆಚ್ಚಿನ ಪಾಲು ಮಧ್ಯವರ್ತಿಗಳು ಪಡೆದು ಮಹಿಳೆಯರಿಗೆ ಮೋಸ ಮಾಡಲಾಗಿದೆ. ಮಹಿಳೆಯರ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆದುಕೊಂಡು ಹೋಗಿದ್ದಾರೆ. ಮಹಿಳೆಯರಿಗೆ ಮಾನಸಿಕ ಹಿಂಸೆ ನೀಡಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ರಾಜ್ಯಾಧ್ಯಕ್ಷರಾದ ವೀರಪ್ಪ ದೇಶನೂರ ಆಗ್ರಹಿಸಿದರು.

ಇನ್ನೋರ್ವ ಮುಖಂಡರು ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸಗಳು ಮತ್ತು ಮಧ್ಯವರ್ತಿಗಳು ಕೂಡಿಕೊಂಡು ಮಹಿಳೆಯರಿಗೆ ಮೋಸ ಮಾಡಿ ಹಣ ದೋಚಿವ ಕೆಲಸವನ್ನು ಮಾಡುತ್ತಿದ್ದಾರೆ. ಖಾನಾಪೂರ ತಾಲೂಕಿನಲ್ಲಿ 2 ವರೆಯಿಂದ 3 ಕೋಟಿ ರೂಪಾಯಿ ದೋಚಿಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ಮಹಿಳೆಯರ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಜಿಲ್ಲಾಡಳಿತ ಗಮನಹರಿಸದೇ ಹೋದರೇ ಸರಣಿ ಸಾವುಗಳು ಸಂಭವಿಸುತ್ತವೆ ಎಂದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘದ ಪದಾಧಿಕಾರಿಗಳು ಮತ್ತು ಮೈಕ್ರೋ ಫೈನಾನ್ಸಗಳ ಕಿರುಕುಳಕ್ಕೆ ಒಳಗಾದ ಮಹಿಳೆಯರು ಭಾಗಿಯಾಗಿದ್ಧರು.

Tags:

error: Content is protected !!