ಕಾಗವಾಡದ ವಿದ್ಯಾಸಾಗರ ಕನ್ನಡ ಪ್ರೌಢ ಶಾಲೆಗೆ ದಾನವೀರ ಮಹಾವೀರ ಪಡನಾಡ ಅವರ ಹೆಸರಿನ ನಾಮಫಲಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅನಾವರಣಗೊಳಿಸಿದರು.
ಸಮಾಜದಲ್ಲಿ ಬೇರೆಯವರಿಂದ ಏನೆಲ್ಲಾ ಕದ್ದುಕೊಳ್ಳಬಹುದು ಆದರೆ ಆತನ ವಿದ್ಯೆಯನ್ನು ಕದ್ದುಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಪ್ರೇಮಿಗಳು ಮಠ ಸಂಘ ಸಂಸ್ಥೆಗಳು ಶಾಲೆಗಳು ಪ್ರಾರಂಭಿಸಿದ್ದು ಸರಕಾರ ಮಾಡುವ ಕಾರ್ಯ ಇವರಿಂದ ನಡದಿದೆ ದಾನವೀರ ಮಹಾವೀರ ಪಡನಾಡ ದಂಪತಿಗಳು ಶಿಕ್ಷಣಕ್ಕಾಗಿ ಆರ್ಥಿಕ ದಾನ ನೀಡುತ್ತಿದ್ದಾರೆ ಇದು ಒಂದು ಶ್ರೇಷ್ಠ ದಾನ ಇವರ ಸೇವೆ ರಾಜ್ಯ ಸರಕಾರ ಗಮನಿಸಲಿದೆ ಎಂದು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚೀವ ಸತೀಶ ಜಾರಕಿಹೊಳಿ ಹೇಳಿದರು.
ಶುಕ್ರವಾರಂದು ಸಂಜೆ ಕಾಗವಾಡದ ಆಚಾರ್ಯ ಶ್ರೀ ೧೦೮ ವಿದ್ಯಾಸಾಗರ ಟ್ರಸ್ಟ ಈ ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢ ಶಾಲೆ ಕಾಗವಾಡ ಈ ವಿಭಾಗಕ್ಕೆ ಶ್ರೀಮತಿ ಕಲ್ಪನಾತಾಯಿ ಮಹಾವೀರ ಪಡನಾಡ ಕನ್ನಡ ಮಾಧ್ಯಮ ಪ್ರೌಢ ಶಾಲೆ ಎಂದು ನಾಮಕರಣ ಮಾಡಲಾಯಿತು ಇದರ ನಾಮಫಲಕದ ಉದ್ಗಾಟನೆ ಸಚೀವ ಸತೀಶ ಜಾರಕಿಹೊಳಿ ನೆರೆವೇರಿಸಿ ಮಾತನಾಡಿದರು.
ಶಿಕ್ಷಣ ಪ್ರೇಮಿ ದಾನವೀರ ಮಹಾವೀರ ಪಡನಾಡ ದಂಪತಿಗಳು ಅಥಣಿ, ಕಾಗವಾಡ ತಾಲೂಕುಗಳಲ್ಲಿ ಅಷ್ಟೇಅಲ್ಲ ಇಡೀ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ ಬಡ ಕುಟುಂಬಗಳಿಗೆ ಆರ್ಥಿಕ ನೆರೆವು ನೀಡುತ್ತಾ ಬಂದಿದ್ದಾರೆ ಇವರ ಸೇವೆ ಮನುಕುಲಕ್ಕೆ ಆದರ್ಶವಾಗಿದೆ ಇವರ ಪ್ರೇರಣೆ ಸಮಾಜದಲ್ಲಿ ಬೇರೆಯವರು ತೆಗೆದುಕೊಳ್ಳಬೇಕೆಂದು ಸತೀಶ ಜಾರಕಿಹೊಳಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ ಮಹಾವೀರ ಪಡನಾಡ ಇವರು ಶಿಕ್ಷಣಕ್ಕಾಗಿ ದಾನ ನೀಡುತ್ತಾ ಬಂದಿದ್ದಾರೆ ದಾನದಲ್ಲಿ ಅನ್ನದಾನ ಶ್ರೇಷ್ಟ ಇದೆ ಆದರೆ ಊಟ ನಂತರ ಒಂದೇ ದಿನದಲ್ಲಿ ಮರೆಯುತ್ತಾರೆ ಶಿಕ್ಷಣಕ್ಕಾಗಿ ನೀಡಿದ ದಾನ ವಿಶ್ವದಲ್ಲಿ ಸೂರ್ಯ ಚಂದ್ರ ಇರುವರೆಗೆ ಪ್ರತಿಯೊಬ್ಬರ ಮನದಲ್ಲಿ ಇವರ ಸೇವೆ ಕೊಂಡಾಡುತ್ತಾರೆ ಎಂದರು.

ದಾನ ನೀಡಿದ ದಾನವೀರ ಮಹಾವೀರ ಪಡನಾಡ ಮಾತನಾಡಿ ನಾನು ಭೂಮಿಯಲ್ಲಿ ಬೆಳೆದ ಬೆಳಗಳಲ್ಲಿ ಬಂದಿರುವ ಆದಾಯದಲ್ಲಿ ನನ್ನ ಪ್ರಪಂಚಕ್ಕೆ ಎಷ್ಟು ಅವಶ್ಯಕ ಟಷೇ ಇಟ್ಟುಕೊಂಡು ಉಳಿದ ಹಣ ಸಮಾಜದಲ್ಲಿಯ ಕಡು ಬಡವ ಮತ್ತು ಶಿಕ್ಷಣಕ್ಕಾಗಿ ದಾನ ನೀಡುತ್ತಿದ್ದೇನೆ ಈಗಾಗಲೆ ಐನಾಪೂರದ ಶ್ರೀ ಪದ್ಮಾವತಿ ಶಿಕ್ಷಣ ಸಮಿತಿಗೆ ರೂ. ೫೦,೦೦೦/- ಗಳು, ಶಿರಗುಪ್ಪಿಯ ಅರಿಹಂತ ಶಿಕ್ಷಣ ಸಮಿತಿಗೆ ರೂ. ೨೫,೦೦೦/- ಗಳು, ಕಾಗವಾಡ ವಿದ್ಯಾಸಾಗರ ಸಂಸ್ಥೆಗೆ ರೂ. ೨೫,೦೦೦/- ಗಳು, ಬೆಳಗಾವಿಯ ಮಹಾವೀರ ಆಂಗ್ಲ ಮಾಧ್ಯಮ ಶಾಲೆಗೆ ರೂ.೧೧,೦೦೦/- ಗಳನ್ನು ಇದೇ ರೀತಿ ಅನೇಕ ವಿದ್ಯಾರ್ಥಿಗಳಿಗೆ ಪರಿಕರಕ್ಕಗಿ ಸಹಾಯ ನೀಡಿದ್ದೇನೆ. ಈ ದಾನ ಸಂಸ್ಥೆಗಳಲ್ಲಿ ಆಗುತ್ತಿರುವ ಆರ್ಥಿಕ ತೊಂದರೆಗೆ ಸಹಕರಿಸುವುದು ಇಷ್ಟೇ ನನ್ನ ಭಾವನೆ ಎಂದರು.
ಸಮಾರಂಭದಲ್ಲಿ ಮಾಜಿ ಇಂಧನ ಖಾತೆ ಸಚೀವ ವೀರ ಕುಮಾರ ಪಾಟೀಲ, ಮಾಜಿ ಶಾಸಕ ಮೋಹನರಾವ ಶಹಾ, ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ// ಎನ್.ಎ.ಮಗದುಮ್ಮ, ಅಥಣಿಯ ಗಜಾನನ ಮಂಗಸೂಳಿ, ವಿಜಯ ಅಕಿವಾಟೆ, ಸಂಸ್ಥೆಯ ಉಪಾಧ್ಯಕ್ಷ ವಿಜಯ ಕರೋಲೆ, ಭಾವುಸಾಹೇಬ ಮಗದುಮ್ಮ, ಪದ್ಮಾಕರ ಕರವ, ರಾಜು ಭೋಬಾಜೆ, ಧನ್ಯಕುಮಾರ ಶೇಟ್ಟಿ, ಸೌ. ಕವಿತಾ ಮಗದುಮ್ಮ, ಅಜೀತ ಮಗದುಮ್ಮ, ಸಚೀನ ಕಠಾರೆ, ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕರಾದ ಜೆ.ಜೆ,ನೇಮಣ್ಣವರ, ಮಾಧ್ಯಮಿಕ ವಿಭಾಗದ ಜಿನೇಂದ್ರ ಮಗದುಮ್ಮ, ಉಪಸ್ಥಿತರಿದ್ದು.
ಪಡನಾಡ ದಂಪತಿಗಳನ್ನು ತೆರೆದ ವಾಹನದಲ್ಲಿ ತೆಗೆದುಕೊಂಡು ಕಾಗವಾಡ ಮಹಾವೀರ ಜೈನ ಮಂದಿರದಿAದ ಶಿಕ್ಷಣ ಸಂಸ್ಥೆಯವರೆಗೆ ಭವ್ಯ ಮರವಣಿಗೆ ಹಮ್ಮಿಕೊಳ್ಳಲಾಯಿತು. ಮರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು.
ಸುಕುಮಾರ ಬನ್ನುರೆ
ಇನ್ ನ್ಯೂಸ್ ಕಾಗವಾಡ