ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನುವಂತೆ ಕಾಂಗ್ರೆಸ ಪಕ್ಷ ಸಮಾವೇಶಕ್ಕೆ ಸರ್ಕಾರಿ ದುಡ್ಡನ್ನು ಬಳಸಿಕೊಳ್ಳುತ್ತಿದೆ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು.

ಇಂದು ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಹಣದಲ್ಲಿ ದುಂದು ವೆಚ್ಚ ಮಾಡುತ್ತಿದ್ದು ಇದರಿಂದ ಏನೂ ಆಗುವುದಿಲ್ಲ ಕೇವಲ ಒಂದು ದಿನದ ಜಾತ್ರೆಯನ್ನು ಮಾಡಿ ಮುಗಿಸಿಕೊಂಡು ಹೋಗುತ್ತಾರೆ ಸಮಾವೇಶ ಮಾಡುವುದಕ್ಕೂ ಕೂಡ ಸೈಟುಗಳನ್ನು ಮುಟ್ಟುಗಳು ಹಾಕುವುದಕ್ಕೂ ಯಾವುದೇ ಸಂಬಂಧವಿಲ್ಲ ಮುಡಾ ಪ್ರಕರಣ ಹೊರಬಂದು ಕಳೆದ ಆರು ತಿಂಗಳಿಂದ ತನಿಖೆ ನಡೆಯುತ್ತಿದೆ ಕಾರಣ ಅದಕ್ಕೆ ಸಮಾವೇಶಕ್ಕೆ ಹೋಲಿಸುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಬೆಳಿಗ್ಗೆಯಿಂದ ಸಂಜೆವರೆಗೆ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಪಾರ್ಟಿ ಎಂದು ಅದರಲ್ಲಿ ಮುಳುಗಿ ಹೋಗಿದ್ದಾರೆ ಸ್ವತಹ ಎಸಿಸಿ ಅಧ್ಯಕ್ಷರೇ ಮಧ್ಯಪ್ರವೇಶಿಸಿ ನೀವು ಸುಮ್ಮನೆ ಇದ್ದುಬಿಡಿ. ಯಾರನ್ನು ಮುಖ್ಯಮಂತ್ರಿಯಾಗಿ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು ಎನ್ನುವುದನ್ನು ನಾನು ಮತ್ತು ರಾಹುಲ್ ಗಾಂಧಿಯವರು ನೋಡಿಕೊಳ್ಳುತ್ತೇವೆ ಎಂದು ನೇರವಾಗಿ ಎಚ್ಚರಿಕೆ ಕೊಡುವ ಮಟ್ಟಕ್ಕೆ ಪರಿಸ್ಥಿತಿ ಗಂಭೀರವಾಗಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ ಅವರಿಗೂ ಸಹ ಯಾರೂ ಹೆದರುತ್ತಿಲ್ಲ ಒಬ್ಬರಾದ ಮೇಲೆ ಒಬ್ಬರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಎಲ್ಲ ಸರಿ ಇಲ್ಲ ಹಾಗಾಗಿ ಬಿಜೆಪಿಯನ್ನು ಕೇಂದ್ರ ಸರ್ಕಾರ ಮತ್ತು ಮೋದಿ ಅವರನ್ನು ಟೀಕಿಸುವ ಯಾವುದೇ ಹಕ್ಕು ನಿಮಗಿಲ್ಲ ಎಂದ ಅವರು ಬಿಜೆಪಿಯಲ್ಲೂ ನೂರಕ್ಕೆ ನೂರರಷ್ಟು ಸರಿ ಇದೆ ಎಂದು ನಾನು ಹೇಳುವುದಿಲ್ಲ ಆದರೆ ಎಲ್ಲ ವಿದ್ಯಮಾನಗಳನ್ನು ವರಿಷ್ಠರು ಗಮನಿಸುತ್ತಿದ್ದಾರೆ ಇಷ್ಟರಲ್ಲಿ ಸರಿ ಮಾಡುತ್ತಾರೆ ಎಂದರು. ಜಾತಿ ಗಣತಿ ಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವುದು ಸರಿಯಲ್ಲ ಅದು ಕೇಂದ್ರದ ಸುಪರ್ದ್ದಿಗೆ ಬರುತ್ತದೆ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣವಿದೆ ಆದ್ದರಿಂದ ಕ್ಯಾಬಿನೆಟ್ ಗೆ ತರಲು ಸಿದ್ದರಾಮಯ್ಯ ಸರ್ಕಾರ ಹೆದರುತ್ತದೆ ಎಂದು ಹೇಳಿದರು.
ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಬೆಳಗಾವಿ ಜಿಲ್ಲೆಯಿಂದ ನೀರು ಹರಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು ಈ ಕುರಿತು ನಾನು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ ಯಾವುದೇ ಕಾರಣಕ್ಕೂ ಕುಡಿಯುವ ನೀರು ಹಾಗೂ ಜಿಲ್ಲೆಯ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ ಒಂದೇ ಭಾರತ ರೈಲು ಕುರಿತು ಮತ್ತೊಮ್ಮೆ ಮನವಿ ಅರ್ಪಿಸಲಾಗಿದೆ ಸಮಸ್ಯೆ ಬಗೆಹರಿಯಬಹುದು ಎಂದು ಹೇಳಿದರು ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಾಕ್ ಫೈಟ್ ಬಗ್ಗೆ ಪ್ರಸ್ತಾಪಿಸಿದವರು ಮತ್ತೊಬ್ಬ ಮುಖಂಡರು ಹೇಳಿದ ಹೇಳಿಕೆ ಬಗ್ಗೆ ನಾನು ಏನನ್ನೂ ಹೇಳಲಾರೆ ಆದರೆ ವರಿಷ್ಠರು ಸಮಸ್ಯೆಯನ್ನು ಇಷ್ಟರಲ್ಲಿ ಬಗೆಹರಿಸುತ್ತಾರೆ ಎಂದು ಹೇಳಿದರು