ಹಿಂದೂ ಸಮಾಜದಲ್ಲಿ ಅಪಮಾನ ಮಾಡುವವರಿಗೆ ತಕ್ಕ ಪಾಠ ಕಲಿಸಲು ಮನೆಯಲ್ಲಿ ತಾಯಂದಿರು ಮಕ್ಕಳಿಗೆ ಶಸ್ತ್ರಾಸ್ತ್ರದ ವಿದ್ಯೆ ಕಲಿಸಬೇಕು ಎಂದು ಶ್ರೀರಾಮ ಮಂದಿರ ನಿರ್ಮಾಣದ ಮುಖ್ಯಸ್ಥ ಗೋಪಾಲ್ ಭಟ್ ಕರೆ ನೀಡಿದರು.
ಭಾನುವಾರ ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಯದ್ದಲಭಾವಿ ಹಟ್ಟಿ ರೋಡ್ ನ ಹುಲಿಯಮ್ಮನ ತೋಟದಲ್ಲಿ ಬಟೆಂಗೆ ತೋ ಕಟೆಂಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ದೇಶದಲ್ಲಿ ಲವ್ ಜಿಹಾದ್ ಆಗಬಾರದು, ಹಿಂದೂಗಳ ಮೇಲೆ ದಬ್ಬಾಳಿಕೆಯಾಗಬಾರದು. ಇಲ್ಲದಿದ್ದರೇ ಹಿಂದೂಗಳು ಪರಾಕ್ರಮ ಮೆರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿಂದೂತ್ವ ಇದ್ದರೇ ಭಾರತ ಇರುತ್ತದೆ. ಭಾರತದ ಮೇಲೆ ಪರಾಕ್ರಮ ದಾಳಿಯಾದಾಗ ಅಯೋಧ್ಯೆಯಯಲ್ಲಿ ರಾಮ ಮಂದಿರ ಧ್ವಂಸವಾಯಿತು. ಹಿಂದುಗಳು ಪರಾಕ್ರಮ ಮೆರೆದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಯಿತು ಎಂದರು. ಬಾಬರ್ ಅಯೋಧ್ಯೆ ಧ್ವಂಸ ಮಾಡಿ ರಾಮನ ನಷ್ಟ ಮಾಡಿದ್ದ. ಬಾಬರ್ ಸತ್ತು ಹೋದ ಆದರೆ ರಾಮನ ಆದರ್ಶ, ರಾಮನ ಮಂದಿರ ಭವ್ಯವಾಗಿ ನಿರ್ಮಾಣ ಮಾಡಲಾಗಿದೆ ಎಂದರು.ಹಿಂದೂತ್ವದ ಪ್ರತೀಕವಾಗಿ ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣವಾಗಿದೆ. ಈಗ ನಾವು ರಾಮರಾಜ್ಯ ನಿರ್ಮಾಣ ಮಾಡಬೇಕು. ಭಾರತಕ್ಕೆ ಸಮೃದ್ಧಿಬೇಕು. ಭಾರತದ ಜಿಡಿಪಿ ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ನಾವು ಹೊರಟ್ಟಿದ್ದೇವೆ. ಸಮಾಜದಲ್ಲಿ ಜಾತಿ, ಭಾಷೆ, ಪ್ರಾಂತ, ಪಂಗಡ ಇಲ್ಲದ ಸಮರಸವಾಗಬೇಕು. ನಾವೆಲ್ಲ ಒಂದು. ನಾವೆಲ್ಲರೂ ಹಿಂದೂವಾಗಬೇಕು. ನಮ್ಮೆಲ್ಲರ ಆರಾಧ್ಯ ಛತ್ರಪತಿ ಶಿವಾಜಿ ಮಹಾರಾಜರು, ಕಿತ್ತೂರು ಚನ್ನಮ್ಮರಾಗಬೇಕು ಎಂದರು.
.
ಹಿಂದೂತ್ವದ ಪ್ರಖರ ವಾಗ್ಮಿ ನಾಜೀಯಾ ಖಾನ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಚುಮ್ಮಾ ಚಾಟಿ, ಅಭಿನೇತ್ರಿ, ಮಹಿಳಾ ಪತ್ರಕರ್ತರ ಜೊತೆಗೂ ಚುಮ್ಮಾ ಚಾಟಿ ಮಾಡಿದ್ದಾರೆ ಎಂದು ಆರೋಪಿಸಿದರು.ಕಳೆದ 25 ವರ್ಷಗಳಿಂದ ನಮ್ಮ ಮುಸ್ಲಿಮ್ ಜನ ಮಲಗಿದ್ದರೂ ಈಗ ರಾಮ ನಾಮ ಜಪ ಮಾಡುತ್ತಿದ್ದಾರೆ. ಮುಸ್ಲಿಮ್ ಹಿಂದೂಗಳನ್ನು ಅನುಸರಿಸುತ್ತಾರೆ. ಆದರೆ ಕೆಲ ಮುಸ್ಲಿಮ್ ರು ದರ್ಗಾದಲ್ಲಿ ಬಾಲಕಿಗೆ ಅತ್ಯಾಚಾರ ಮಾಡಿದ್ದಾನೆ. ಅದು ಅಲ್ಲಾನ್ ಮರ್ಜಿಲೆ ಮಾಡ್ತಾನಾ.. ವ್ಹಾಹರೇ ವ್ಹಾ.. ಅಲ್ಲಾ.. ಅಂಥವರ ವಿರುದ್ಧ ಮುಸ್ಲಿಮ್ ಸಮುದಾಯದವರು ತಲ್ವಾರ ಎತ್ತಿ ಎಂದು ಕರೆ ನೀಡಿದರು.ನಾನು ರಾಮನನ್ನು ಪೂಜಿಸುತ್ತೇನೆ ಅಲ್ಲಾನನ್ನು ಅಲ್ಲಾ.. ಸಜ್ಜಾದ ಮಾಮನಿ ಸಾಬ್ ಪತ್ತಾ ಜಾರಿ ಮಾಡಿದ್ರು ಕಾಂಗ್ರೆಸ್ ಗೆ ಓಟ್ ಮಾಡಲು ಪತ್ತಾ ಜಾರಿ ಮಾಡಿದ್ರು ಓವೈಸಿಗೆ ವೋಟು ಮಾಡಲು ಅವರು ಪತ್ತಾ ಹೊರಡಿಸಿದ್ದರು. ಸಜ್ಜಾದ್ ಮರ್ಮಾನಿ.. ಈದ್ ಗೆ ಹೋಗಿ ಶೀರಕುರಮಾ ಹೋಗುತ್ತೀರಿ ಎರಡೂ ತಿಂಗಳ ನಂತರ ಮುಸ್ಲಿಮ್ ಅದೇ ಗೋವು ನ್ನು ಅವರು ಕತ್ತರಿಸುತ್ತಾರೆ. ನೀವು ಪೂಜೆ ಮಾಡುವ ದೇವರ ಮಂದಿರವನ್ನು ಮುಸ್ಲಿಮ್ ಒಡೆಯುತ್ತಾನೆ ಎಂದರು.
ಶ್ರೀ ಜೀತೇಂದ್ರಾನಾಥ ಸ್ವಾಮೀಜಿ ಮಾತನಾಡಿ, ಗೋ ಹತ್ಯೆ, ಗೋ ರಕ್ಷಣೆ ಮಾಡಬೇಕೆಂದು ಹಿಂದೂಗಳು ಹೋರಾಟ ಮಾಡುವ ಪ್ರಸಂಗ ಭಾರತ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ನಮ್ಮ ದೇಶದಲ್ಲಿದ್ದುಕೊಂಡು ದೇಶ ಒಡೆಯುವ ಕುತಂತ್ರ ಮಾಡುವವರೆಗೆ ದೇಶ ದ್ರೋಹಿ ಎಂದರೆ ತಪ್ಪು ಏನು ? ಭಾರತವನ್ನು ಕೆಲವರು ಪಾಕಿಸ್ತಾನ ಮಾಡಿದ್ದಾರೆ. ಅದನ್ನು ಹಿಂದೂಗಳು ಭಾರತವನ್ನಾಗಿ ಮಾಡುತ್ತೇವೆ. ದೇಶವನ್ನು ಒಡೆದು ಪಾಕಿಸ್ತಾನ ಮಾಡಿದವರು ಯಾರೂ ? ಭಾರತದಲ್ಲಿ ಭಯೋತ್ಪಾದನೆ ಮಾಡಲು ಆಗುವುದಿಲ್ಲ ಎಂದು ಪಾಕಿಸ್ತಾನವನ್ನು ಮುಸ್ಲಿಮ್ ರಿಗೆ ಮಾಡಿಕೊಟ್ಟರು ಎಂದರು.
ಪಂಡಿತ್ ಓಗಲೆ ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಎಂದಿಗೂ ಸಹಾಯ ಮಾಡಿಲ್ಲ. ಬದಲಾಗಿ ಬಾಬರಿ ಮಸೀದಿ ನಿರ್ಮಾಣಕ್ಕೆ ಸಹಾಯ ಮಾಡಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು. ಶಾಹುನಗರದಲ್ಲಿ ಔರಂಗಜೇಬನ ಬ್ಯಾನರ್ ಹಾಕುವ ಮುಸ್ಲಿಮ್ ಗೆ ಯಾವ ರೀತಿ ಪಾಠ ಕಲಿಸಬೇಕು. ಇದನ್ನು ಹಿಂದೂಗಳು ಜಾಗೃತರಾಗಬೇಕು. ಈಗ ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ ಹಿಂದೂಗಳ ಜಮೀನು ಕಬಳಿಸುವ ಹುನ್ನಾರ ನಡೆಸಿದ್ದಾರೆ. ಹಿಂದೂಗಳು ಜಾಗೃತರಾಗಿ ಇಲ್ಲದಿದ್ದರೆ ಕರ್ನಾಟಕದಲ್ಲಿ ಹಿಂದೂಗಳಿಗೆ ಉಳಿಗಾಲ ಇಲ್ಲ ಎಂದರು.
ಈ ವೇಳೆ ಶಾಸಕ ಅಭಯ ಪಾಟೀಲ್, ಜಯದೀಪ್ ಸರಕಾರ, ಡಾ. ಸಿದ್ದೇಶ್ವರ ದೇವರ, ಸಮೀರ್ ಪಾಟೀಲ್, ಕಿರಣ್ ಚೌಹಾಣ್, ಜ್ಯೋತಿಬಾ ಜಾಧವ, ಧನಂಜಯ ಜಾಧವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.