ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಅತ್ಯಂತ ಪುರಾತನವಾಗಿದ್ದು, ಜನಪದ ಸಾಹಿತ್ಯ ಜನಪದ ಸಾಹಿತ್ಯ ಶಿಷ್ಟ ಸಾಹಿತ್ಯದ ತಾಯಿ ಬೇರಾಗಿದೆ. ಅದನ್ನು ಯುವ ಪೀಳಿಗೆಗೆ ಪರಿಚಯಿಸುವ, ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸದಸ್ಯರಾದ ಹಮೀದಾ ಬೇಗಂ ದೇಸಾಯಿ ಅಭಿಪ್ರಾಯ ಪಟ್ಟರು

ಇಲ್ಲಿನ ಕನ್ನಡ ಸಾಹಿತ್ಯ ಭವದಲ್ಲಿ ಶನಿವಾರ ಪೃಥ್ವಿ ಫೌಂಡೇಶನ್ ವತಿಯಿಂದ ಆಯೋಜಿಸಲಾದ ” ಜಾನಪದ ಸಂಭ್ರಮ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ನಮ್ಮ ನಾಡಿನ ಜೀವಾಳ, ನಮ್ಮ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಪ್ರಯತ್ನ ನಿರಂತರವಾಗಿ ನಡೆಯಬೇಕಿದೆ. ಜನರ ಬಾಯಿಂದ ಬಾಯಿಗೆ ಹರಡುವ ಜನಪದ ಅತ್ಯಂತ ಸರಳ ಶೈಲಿಯಲ್ಲಿ ಎಲ್ಲರ ಮನಮಟ್ಟುತ್ತವೆ ಎಂದು ಹೇಳಿದರು.
ಜನಪದ ತ್ರಿಪದಿಗಳನ್ನು ಹಾಡುತ್ತಾಅವುಗಳ ವಿಶಿಷ್ಠ ರೀತಿಯಲ್ಲಿ ನೀತಿ-ತತ್ವಗಳನ್ನು ಭೋಧಿಸುತ್ತಾ ಸ್ವಾಸ್ಥ್ಯ ಸಮಾಜವನ್ನು ವಿಲೀನಸುವಲ್ಲಿ ಜಾನಪದ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ ಎಂದರು.
ಜಯಶೀಲಾ ಬ್ಯಾಕೋಡ್ ಅವರು ಮಾತನಾಡಿ, ಪೃಥ್ವಿ ಫೌಂಡೇಶನ್ ದಿಂದ ಸಾಮಾಜಿಕ ಪ್ರಗತಿ-ಪರ ಕಾರ್ಯಗಳನ್ನು ಆಯೋಜಿಸುತ್ತಿರುವುದು ಸಂತಸವಾಗಿದೆ. ಸಂಸ್ಕೃತಿಯನ್ನು ಬೆಳೆಸುವುದು ನಮ್ಮ ಹೊಣೆಯಾಗಿದೆ. ಮುಂದಿನ ದಿನಗಳಲ್ಲಿ ಪೃಥ್ವಿ ಫೌಂಡೇಶನ್ ಅಭಿವೃದ್ಧಿಯತ್ತ, ಹೆಮ್ಮರವಾಗಿ ಬೆಳೆಯಲ್ಲಿ ಎಂದು ಹಾರೈಸಿದರು.
ಪೃಥ್ವಿ ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಗೈದಿರುವ ಜಯಶೀಲಾ ಬ್ಯಾಕೋಡ್, ಗಿರಿಜಾ ಮುಳಗುಂದ, ಬಾಳಗೌಡ ದೊಡಬಂಗಿ, ಗುರುಗೌಡ ಮಲಗೌಡ ಪಾಟೀಲ ಅವರಿಗೆ ಅನುಪಮ ಸೇವಾರತ್ನ ಹಾಗೂ ಡಾ. ಬಸನಗೌಡ ಬಿ. ಪಾಟೀಲ ಅವರಿಗೆ ಅನುಪಮ ಜ್ಞಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೃಥ್ವಿ ಫೌಂಡೇಶನ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಡಾ. ಹೇಮಾವತಿ ಸೊನೊಳ್ಳಿ ಅಧ್ಯಕ್ಷತೆ ವಹಿಸಿದರು. ರತ್ನಪ್ರಭಾ ಬೆಲ್ಲದ , ಜ್ಯೋತಿ ಮಾಳಿ ,ವಾಸಂತಿ ಮೇಳೆದ, ದ್ರಾಕ್ಷಾಯಿಣಿ ಕಾಪಸೆ, ಸುನಂದಾ ಎಮ್ಮಿ, ಲಲಿತಾ ಪರ್ವತರಾವ, ಶಾಲಿನಿ ಬೆನಿವಾರ, ಸುನೀತಾ ನಂದೆಣ್ಣವರ, ಅನ್ನಪೂರ್ಣಾ ಹಿರೇಮಠ, ದಾನಮ್ಮ ಅಂಗಡಿ, ಸುನೀತಾ ಸೊಲ್ಲಾಪುರೆ, ಮಹಾನಂದಾ ಪರಶೆಟ್ಟಿ , ಅಕ್ಕಮಹಾದೇವಿ ಹುಲಗಬಾಳಿ, ಭಾರತಿ ಮಠದ , ರೇಖಾ ಶ್ರೀನಿವಾಸ , ಪ್ರೇಮಾ ಪಾನಶೆಟ್ಟಿ, ರಂಜನಾ ಪಾಟೀಲ , ಅನಿತಾ ಮಾಲಗತ್ತಿ, ಅಂಜನಾ, ಸ. ರಾ. ಸುಳಕುಡೆ, ಬನಶಂಕರಿ, ಬಾಳಪ್ಪಾ ಪಾಟೀಲ, ಸಂಘದ ಕಾರ್ಯದರ್ಶಿ ಶೈಲಜಾ ಹಿರೇಮಠ ಸ್ವಾಗತಿಸಿದರು. ಮಹಾದೇವಿ ಹಿರೇಮಠ, ಪಾರ್ವತಿ ಹಿರೇಮಠ ಗಣ್ಯರನ್ನು ಸ್ವಾಗತಿಸಿದರು. ಇಂದಿರಾ ಮೋಟೆಬೆನ್ನೂರ ಪರಿಚಯಿಸಿದರು. ಮೀನಾಕ್ಷಿ ಸೂಡಿ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಭವನೇಶ್ವರಿ ಪೂಜೇರಿ ವಂದಿಸಿದರು.