Belagavi

ಶಿಕ್ಷಣ ಇಲಾಖೆ ಕಾರ್ಯವೈಖರಿ ವಿರುದ್ಧ ಕೆ.ಡಿ.ಪಿ ಸಭೆಯಲ್ಲಿ ಎಂ.ಎಲ್.ಸಿಗಳ ಆಕ್ರೋಶ….

Share

ಬೆಳಗಾವಿಯ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಬೆಳಗಾವಿ ಶಿಕ್ಷಣ ಇಲಾಖೆಯ ಬೆಂಚ ವಿತರಣೆಯ ವಿಳಂಬ ನೀತಿ ಮತ್ತು ಮೊಟ್ಟೆ ವಿತರಣೆಯಲ್ಲಾಗುತ್ತಿರುವ ಲೋಪದೋಷಗಳ ವಿರುದ್ಧ ಪರಿಷತ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಕೆ.ಡಿ.ಪಿ ಸಭೆಯನ್ನು ಕರೆಯಲಾಗಿತ್ತು. ವೇದಿಕೆಯ ಮೇಲೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಸರ್ಕಾರದ ಮುಖ್ಯಸಚೇತಕರಾದ ಪ್ರಕಾಶ್ ಹುಕ್ಕೇರಿ, ಶಾಸಕ ರಾಜು ಕಾಗೆ, ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ ಗುಳೇದ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಉಪಸ್ಥಿತರಿದ್ಧರು.

ಶಾಸಕರಾದ ಆಸೀಫ್ ಸೇಠ್ ಮತ್ತು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ ಅವರು 2 ವರ್ಷವಾದರೂ ಸರ್ಕಾರಿ ಶಾಲೆಯ ಮಕ್ಕಳಿಗೆ ಡೆಸ್ಕ್ ನೀಡದ ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಹೇಳಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನೇ ಒದಗಿಸದೇ ಹೋದರೇ ಹೇಗೆ? ಎಂದು ಪ್ರಶ್ನಿಸಿದರು. ಯುದ್ಧೋಪಾದಿಯಲ್ಲಿ ಸೌಕರ್ಯಗಳನ್ನು ಒದಗಿಸುವ ಕೆಲಸಗಳಾಗಬೇಕು ಎಂದರು.

ವಿಧಾನ ಸಭೆಯ ಮುಖ್ಯ ಸಚೇತಕರಾದ ಪ್ರಕಾಶ ಹುಕ್ಕೇರಿಯವರು ತಾವು ಸಭೆಯನ್ನು ಕರೆದಾಗ ಬಿ.ಇ.ಓ ಗೈರಾಗಿದ್ದರು. ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲವೆಂದು ಸಚಿವ ಸತೀಶ ಜಾರಕಿಹೊಳಿ ಪ್ರಶ್ನಿಸಿದರು. ಬಿ.ಇ.ಓ ವಿರುದ್ಧ ಕ್ರಮಕೈಗೊಳ್ಳುತ್ತಿರೋ ಅಥವಾ ನಾವೇ ರಾಜೀನಾಮೇ ನೀಡಬೇಕಾ ಎಂದು ಪ್ರಕಾಶ ಹುಕ್ಕೇರಿಯವರು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಅವರು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಆದರೇ ಎಸ್ ಆರ್ ರೇಟ್ ಇಲ್ಲವೆಂದು 58 ರಿಂದ 60 ಲಕ್ಷದ ಟೆಂಡರ್ ಕರೆಯಲು ಸುಮಾರು 2 ವರ್ಷ ಕಾಲಾವಧಿ ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಸುಮಾರು 20 ರಿಂದ 30 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಂಚುಗಳನ್ನು ನೀಡಲಾಗಿದೆ. ಆದರೇ ಅವುಗಳನ್ನು ವಿತರಿಸಲು ಮೀನಮೇಷ ಎಣಿಸಲಾಗುತ್ತಿದೆ. ಇನ್ನು ನಗರಪ್ರದೇಶದ ಶಾಲೆಗಳ ಅಭಿವೃದ್ಧಿ ಅನುದಾನ ಮಂಜೂರುಗೊಳಿಸಿದರೂ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸದುಪಯೋಗ ಪಡಿಸಿಕೊಳ್ಳಲಿಲ್ಲವೆಂದರೇ, ಅನುದಾನ ಮಂಜೂರುಗೊಳಿಸಿ ಏನು ಪ್ರಯೋಜನ ಪ್ರಶ್ನಿಸಿದರು.

ಇನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅಸ್ತಿತ್ವಕ್ಕೆ ಬರುವ ಶಾಲೆಗಳ ಅಭಿವೃದ್ಧಿಗೆ ಸರ್ಕಾರಿ ಅನುದಾನ ಬಳಿಸಕೊಳ್ಳುವ ಕುರಿತು ಮಹಾನಗರ ಪಾಲಿಕೆ ಮತ್ತು ಶಿಕ್ಷಣ ಇಲಾಖೆಯ ಸಭೆಯನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಮೊಹ್ಮದ ರೋಷನ್ ಹೇಳಿದರು.
ಇನ್ನು ಶಾಸಕ ರಾಜು ಕಾಗೆ ಅವರು ಕೆಲ ಶಾಲೆಗಳಲ್ಲಿ ಮೊಟ್ಟೆ ತಿನ್ನದೇ ಹೋದ್ರು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮೊಟ್ಟೆಯನ್ನೇ ವಿತರಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸುವಂತೆ ಸೂಚಿಸಿದರು.

Tags:

error: Content is protected !!