ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಜತೆಗೆ ಕಾನೂನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬುಧವಾರ ತಡ ರಾತ್ರಿ ಸಾರ್ವಜನಿಕ ನಿಬಿಡ ಪ್ರದೇಶಗಳಿಗೆ ತೆರಳಿ ಠಾಣಾ ಅಧಿಕಾರಿಗಳು ಸಾರ್ವಜನಿಕರಿಗೆ ಕಾನೂನು ತಿಳಿವಳಿಕೆ ಸೇರಿ 112 ಸಹಾಯವಾಣಿ ಸದುಪಯೋಗ ಮಾಡಿಕೊಳ್ಳಲು ಕರೆ ನೀಡಿದರು.

ನಗರದ ಆಕಾಶವಾಣಿ ವೃತ ಸೇರಿ ಸಪ್ತಾಪುರ. ಪ್ರದೇಶ ವ್ಯಾಪ್ತಿಯ ಸಾರ್ವಜನಿಕ ನಿಬಿಡ ಪ್ರದೇಶಗಳಿಗೆ ಭೇಟಿ ನೀಡಿದ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮನೆಯಲ್ಲಿ ಬೆಲೆ ಬಾಳು ವಸ್ತು ಸೇರಿ ನಗದು ಹಣವನ್ನು ಬ್ಯಾಂಕನಲ್ಲಿ ಇಡದಂತೆ ಸಲಹೆ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೆ ತಮ್ಮಗೆ ಅನುಮಾನಸ್ಪದ ವ್ಯಕ್ತಿ ಅಥವಾ ಘಟನೆಗಳು ಕಂಡಲ್ಲಿ 112 ಕರೆ ಮಾಡಿ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಿದರು. ಜತೆಗೆ ಇತ್ತೀಚೆಗೆ ರಾಜ್ಯದಲ್ಲಿ ಹೊರ ರಾಜ್ಯದಿಂದ ಬಂದು ಅಪರಾಧ ಕೃತ್ಯಗಳನ್ನು ಕ್ರಮೀನಲ್‌ಗಳು ನಡೆಸುತ್ತಿದ್ದಾರೆ. ಹಾಗಾಗಿ ಹೊರ ರಾಜ್ಯದಿಂದ ಬಂದವರಲ್ಲಿ ಯಾರಾದರೂ ಅನುಮಾನಸ್ಪದ ವ್ಯಕ್ತಿಗಳು ಓಡಾಟ ಕಂಡು ಬಂದಲ್ಲಿ ಠಾಣೆ ಅಥವಾ 112ಗೆ ಕರೆ ಮಾಡುವಂತೆ ಮನವಿ ಮಾಡಿದರು. ಯಾರು ಕೂಡಾ ಕಾನೂನು ಕೈಗೆತ್ತಿಕೊಳ್ಳಬಾರದು, ಎಲ್ಲರು ಕಾನೂನು ಪಾಲನೆ ಮಾಡುವುದು ಈ ದೇಶದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಎಲ್ಲರೂ ಎಚ್ಚರಿಕೆ ಹಾಗೂ ಜಾಗೃತಿಯಿಂದ ಇರುವಂತೆ ಸಾರ್ವಜನಿಕರಿಗೆ ತಿಳಿ ಹೇಳಿದರು. ಸಂದರ್ಭದಲ್ಲಿ ಧಾರವಾಡ ಎಸಿಪಿ ಪ್ರಶಾಂತ್ ಸಿದ್ದನಗೌಡರ. ಉಪನಗರ ಪೊಲೀಸ ಠಾಣೆಯ ಸಿಪಿಐ ದಯಾನಂದ ಶೇಗುಣಸಿ, ಪಿಎಸ್‌ಐ ವಿ ಎಲ್ ಬಳ್ಳಾರಿ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.