ಆತ ತಂದೆ ತಾಯಿಗೆ ಒಬ್ಬನೇ ಮಗ ನೋಡೋಕೆ ಪೈಲ್ವಾನ್ ನಂತ ಮಗ.ಮಾಡೋಕೆ ಒಳ್ಳೆ ಕೆಲಸವೂ ಇತ್ತು. ತಂದೆ ತಾಯಿ ಒಬ್ಬನೇ ಮಗ ಅಂತಾ ಮುದ್ದಾಗಿ ಸಾಕಿದ್ರು.ಆದ್ರೆ ಎದೆಯುದ್ದ ಬೆಳೆದ ಮಗ ಪ್ರೇಮದ ಬಲೆಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.ಪ್ರೇಯಸಿಯ ಕಾಟದಿಂದ ಮನನೊಂದು ಜೀವ ಬಿಟ್ಟಿದ್ದಾನೆ.ಸಾಯೋಕು ಮುನ್ನ ಆತ ತನ್ನ ತಾಯಿಗೆ ಕೊನೆಯ ಮಸೆಜ್ ಕಳಸಿದ್ದಾನೆ.ಮೆಸೆಜ್ ನಲ್ಲಿ ತನ್ನ ಸಾವಿಗೆ ಕಾರಣ ಯಾರೂ ಅನ್ನೋದನ್ನ ಬಹಿರಂಗ ಮಾಡಿದ್ದಾನೆ.ಸಾರಿ ನೀವು ಚೆನ್ನಾಗಿರಿ,ಎಂದು ಕೊನೆಯ ಸಂದೇಶ ಕಳುಹಿಸಿ ಕೆರೆಗೆ ಬಿದ್ದಿದ್ದಾನೆ.ಅರೇ ಏನಿದು ಪ್ರೇಮ,ತಾಯಿಗೆ ಕೊನೆಯ ಮೆಸೆಜ್,ಆತ್ಮಹತ್ಯೆ ಅಂತೀರಾ ಈ ಸ್ಟೋರಿ ನೋಡಿ.
ಈ ಫೊಟೋದಲ್ಲಿರೋ ಯುವಕನನ್ನ ಒಂದು ಸಾರಿ ನೋಡಿ ಬಿಡಿ.ನೋಡೋಕೆ ಥೇಟ್ ಪೈಲ್ವಾನ್ ನಂತೆ ಕಾಣ್ತೀದಾನೆ.ವಯಸ್ಸಿನ್ನು ಕೇವಲ 27.ಹೆಸರು ಸಂದೇಶ ಯರಕದ.ಹುಬ್ಬಳ್ಳಿಯ ನವನಗರ ನಿವಾಸಿ.ಇದೇ ಸಂದೇಶ ಇದೀಗ ತನ್ನ ತಾಯಿಗೆ ಭಾವನಾತ್ಮಕ ಸಂದೇಶ ಕಳಿಸಿ ಪ್ರಾಣ ಬಿಟ್ಟಿದ್ದಾನೆ.ಸಂದೇಶ ಪ್ರಾಣ ಬಿಡಲು ಕಾರಣವಾಗಿದ್ದು,ಪ್ರೀತಿ ಪ್ರೇಮ.ಎಸ್ 27 ವರ್ಷದ ಸಂದೇಶ ಸಂಜನಾ ಅನ್ನೋ ಹುಡಗಿ ಪ್ರೀತಿ ಮಾಡತಿದ್ದ.ಮೊದಲು ಮೊದಲು ಪ್ರೀತಿಯಲ್ಲಿ ಎಲ್ಲವೂ ಚೆನ್ನಾಗಿತ್ತು.ಆದ್ರೆ ದಿನಕಳೆದಂತೆ ಇಬ್ಬರ ಮದ್ಯೆ ಎಲ್ಲವೂ ಸರಿ ಇರಲಿಲ್ಲ.ಪ್ರೇಯಸಿಯ ಕಾಟ ವಿಕೋಪಕ್ಕೆ ಹೋಗಿತ್ತು.ಇದೇ ಕಾರಣಕ್ಕೆ ಇದೀಗ 27 ವರ್ಷದ ಸಂದೇಶ ಪ್ರಾಣ ಬಿಟ್ಟಿದ್ದಾನೆ. ಪ್ರಾಣ ಬಿಡೋಕು ಮುನ್ನ ತನ್ನ ತಾಯಿ ಪ್ರೀತಿಗೆ ಕೊನೆಯ ಸಂದೇಶ ಕಳಸಿದ್ದಾನೆ.ತಾಯಿ ಮನೆಗೆ ಬಾ ಅಂದರೂ ಬರದೇ ಮೊಬೈಲ್ ಸ್ವಿಚ್ಡ್ ಆಪ್ ಮಾಡಿ ಶನಿವಾರ ಕೆರೆಗೆ ಬಿದ್ದವ,ನಿನ್ನೆ ಹೆಣವಾಗಿ ಪತ್ತೆಯಾಗಿದ್ದಾನೆ.
ಹುಬ್ಬಳ್ಳಿಯ ನವನಗರ ನಿವಾಸಿಯಾಗಿದ್ದ ಸಂದೇಶ್ ಮೋಟಾರ್ ಬೈಕ್ ಶೋ ರೂಮ್ ನಲ್ಲಿಕೆಲಸ ಮಾಡ್ತಿದ್ದ. ತಂದೆ ತಾಯಿ ಜೊತೆ ಚೆನ್ನಾಗಿಯೇ ಇದ್ದ.ಯಾವಾಗ ಸಂಜನಾ ಸಹವಾಸ ಆಯ್ತೋ,ಅಲ್ಲಿಂದ ಆತ ಪ್ರೇಮಲೋಕದಲ್ಲಿ ತೇಲಾಡುತಿದ್ದ.ಅವಳ ಮಾತು ಕೇಳಿ ಕೆಲ ಸಲ ಮನೆಯವರಿಗೂ ರೇಗಾಡಿದ್ದಾನೆ.ಆದ್ರೆ ಇತ್ತ ಲವ್ ಅನ್ನೋದು ಜಸ್ಟ್ ಫ್ಯಾಷನ್ ಅಂದುಕೊಂಡ ಸಂಜನಾ ಸಂದೇಶ್ ಗೆ ವಿಪರೀತ ಟಾರ್ಚರ್ ಮಾಡತಿದ್ಲು.ಅಲ್ಲದೆ ಬೇರೆ ಹುಡಗರ ಜೊತೆ ಸಲುಗೆಯಿಂದ ಇರ್ತಾ ಇದ್ಲು.ಇದರಿಂದ ಮಾನಸಿಕವಾಗಿ ನೊಂದು ಕೆಲ ದಿನ ಸಂದೇಶ ಬ್ರೇಕ್ ಅಪ್ ಕೂಡಾ ಮಾಡಿಕೊಂಡಿದ್ದ.ಆದ್ರೆ ಪ್ರೀತಿ ಗುಂಗು ಹೋಗಿರಲಿಲ್ಲ,ಸಂಜನಾ ಕಾಟ ಯಾವಾಗ ವಿಕೋಪಕ್ಕೆ ಹೋಯ್ತೋ ಸಂದೇಶ ಸಾಯೋ ನಿರ್ಧಾರ ಮಾಡಿದ್ದ.ಸಾಯೋ ಮುನ್ಮ ತನ್ನ ಪ್ರೇಯಸಿಗ ಖಾಸಗಿ ಫೊಟೋ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ.ಪ್ರೀಯತೆಮಯ ಕಾಟಕ್ಕೆ ನೊಂದು ಹೋಗಿದ್ದ ಸಂದೇಶ ಕೊನೆಗೂ ಪ್ರಾಣ ಬಿಟ್ಟಿದ್ದಾನೆ. ಮಗನನ್ನ ಕಳೆದುಕೊಂಡ ತಾಯಿ ಕಣ್ಣೀರು ಹಾಕುತಿದ್ದು,ಇದಕ್ಕೆಲ್ಲ ಅವಳೇ ಕಾರಣ ಅಂತೀದಾರೆ ಸಂದೇಶ ತಾಯಿ ಪ್ರೀತಿ.
ಒಟ್ಟಾರೆ ಪ್ರೀತಿ ಮಾಯೆ ಹುಷಾರ್ ಅನ್ನೋದು ಇಲ್ಲಿ ಸಾಬೀತಾಗಿದೆ.ದೇವತೆಯಂತೆ ನಂಬಿ ಪ್ರೀತಿ ಮಾಡಿದ ಸಂದೇಶ್ ಗೆ ಸಿಕ್ಕಿದ್ದು ಬರೀ ಮೋಸ ಸುಳ್ಳು,ಹೀಗಾಗಿ ಸಂದೇಶ ತನ್ನ ತಾಯಿಗೆಕೊನೆಯ ಸಂದೇಶ ಕಳಸಿ ಉಸಿರು ಚೆಲ್ಲಿದ್ದಾನೆ.ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕಾಯ್ದೆಅಡಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸ್ತೀದಾರೆ.