Belagavi

ಬೆಳಗಾವಿಯಲ್ಲಿ ಪೌರ/ಸ್ವಚ್ಛತಾ ಕಾರ್ಮಿಕರಿಗೆ ಉಪಹಾರ ವಿತರಣಾ ಯೋಜನೆಗೆ ಚಾಲನೆ

Share

ಬೆಳಗಾವಿ ನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಬೆಳಗ್ಗಿನ ಉಪಹಾರ ವಿತರಣೆ ಯೋಜನೆಯನ್ನು ಆರಂಭಿಸಲಾಗಿದ್ದು, ಶೀಘ್ರದಲ್ಲೇ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲಾಗುವುದು ಎಂದು ಉತ್ತರ ಶಾಸಕ ಆಸೀಫ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರದಂದು ಬೆಳಗಾವಿಯ ಕುಮಾರಗಂಧರ್ವ ಕಲಾ ಮಂದಿರದಲ್ಲಿ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಬೆಳಗ್ಗಿನ ಉಪಹಾರ ವಿತರಣೆ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ವೇದಿಕೆಯ ಮೇಲೆ ಉತ್ತರ ಶಾಸಕ ಆಸೀಫ್ ಸೇಠ್, ಮಹಾಪೌರ ಸವೀತಾ ಕಾಂಬಳೆ, ಉಪಮಹಾಪೌರರಾದ ಆನಂದ ಚವ್ಹಾಣ, ನಗರಸೇವಕ ಆಡಳಿತ ಪಕ್ಷದ ನಾಯಕ ಗಿರೀಶ್ ಧೋಂಗಡಿ, ಶಾಹೀದ್ ಪಠಾಣ, ರೇಷ್ಮಾ ಭೈರಕದಾರ, ಜಯತೀರ್ಥ ಸವದತ್ತಿ, ರೇಷ್ಮಾ ಪಾಟೀಲ್, ಕಮಿಷ್ನರ್ ಶುಭಾ. ಬಿ. ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ, ಶ್ರೇಯಸ್ ನಾಕಾಡಿ, ಮುಸ್ತಾಕ್ ಮುಲ್ಲಾ, ಡಾ. ದಿನೇಶ್ ನಾಶಿಪುಡಿ, ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ನಂತರ ಪೌರ ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷತಾ ಕಿಟಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, ಮಳೆ, ಬಿಸಿಲೆನ್ನದೇ ಪೌರ ಕಾರ್ಮಿಕರು ನಗರ ಸ್ವಚ್ಛತೆಗಾಗಿ ಪ್ರತಿದಿನ ಶ್ರಮಪಡುತ್ತಾರೆ. ತಮ್ಮೆಲ್ಲರ ಸೇವೆ ಪ್ರಶಂಸನೀಯ ಎಂದರು. ಅವರು ಸೇವೆ ಸಲ್ಲಿಸಲು ನೆರವಾಗುವಂತೆ ಅವರಿಗೆ ಬೆಳಗ್ಗಿನ ಉಪಹಾರ ವಿತರಿಸಲಾಗುತ್ತಿದೆ ಎಂದರು. ನಗರ ಸ್ವಚ್ಛತೆಗಾಗಿ ಸೇವೆ ಸಲ್ಲಿಸುವ ಪೌರ ಕಾರ್ಮಿಕ ಸೇವೆಯನ್ನು ಶೀಘ್ರದಲ್ಲೇ ಖಾಯಂಗೊಳಿಸಲಾಗುವುದು ಎಂದು ಭರವಸೆಯನ್ನು ನೀಡಿದರು.


ಇನ್ನು ಮಹಾಪೌರರಾದ ಸವಿತಾ ಕಾಂಬಳೆ ಅವರು ನಗರ ಸ್ವಚ್ಛತೆಯನ್ನು ಕೈಗೊಂಡು ನಗರವಾಸಿಗಳು ಆರೋಗ್ಯಯುತವಾಗಿರುವಂತೆ ಶ್ರಮವಹಿಸುವ ಪೌರ ಕಾರ್ಮಿಕರು ಆರೋಗ್ಯವಂತಾರಿಗರಬೇಕಾದರೇ ಬೆಳಗ್ಗಿನ ಉಪಹಾರವನ್ನು ಸೇವಿಸಬೇಕು. ಶಾಸಕರು, ನಗರಸೇವಕರು ಮತ್ತು ಅಧಿಕಾರಿಗಳು ಒಗ್ಗೂಡಿ ಆರಂಭಿಸಿದ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಇನ್ನು ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ. ಅವರು ಮೊದಲು ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ವೇತನದಲ್ಲಿ ಉಪಹಾರ ಭತ್ಯೆಯನ್ನು ಸೇರಿಸಿಲಾಗುತ್ತಿತ್ತು. ಆದರೇ ಈಗ ಸರ್ಕಾರ ನೇರವಾಗಿ ಉಪಹಾರವನ್ನೇ ವಿತರಿಸುತ್ತಿದೆ. ಬೆಳಗಿನ ಜಾವವೇ ಸೇವೆಗೆ ಅಣಿಯಾಗುವ ಪೌರ ಕಾರ್ಮಿಕರಿಗೆ ಪೌಷ್ಟಿಕ ಆಹಾರ ಸಿಗುವುದು ಅವಶ್ಯಕವಾಗಿದೆ. ಪ್ರತಿದಿನ ಉಪಹಾರದೊಂದಿಗೆ ಮೊಟ್ಟೆಯನ್ನು ಕಡ್ಡಾಯವಾಗಿ ನೀಡಲಾಗುವುದು ಎಂದ ಅವರು ಈ ಯೋಜನೆಯನ್ನು ಶಾಸಕರು, ನಗರಸೇವಕರು ಮತ್ತು ಅಧಿಕಾರಿಗಳು ಒಗ್ಗೂಡಿ ಆರಂಭಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ನಂತರ ಸ್ವತಃ ಶಾಸಕರು, ಮಹಾಪೌರರು, ಉಪಮಹಾಪೌರರು ಪೌರ ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಉಪಹಾರವನ್ನು ವಿತರಿಸಿದ್ದು, ವಿಶೇಷವಾಗಿತ್ತು. ಈ ವೇಳೆ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಶೈಲ್ ಕಾಂಬಳೆ, ನಗರಸೇವಕರಾದ ಶಂಕರ ಪಾಟೀಲ್ ಸೇರಿದಂತೆ ಪೌರ ಮತ್ತು ಸ್ವಚ್ಛತಾ ಕಾರ್ಮಿಕರು ಬಹುಸಂಖ್ಯೆಯಲ್ಲಿ ಭಾಗಿಯಾಗಿದ್ದರು.

Tags:

error: Content is protected !!