ಜಾಮೀನು ಪಡೆಯಲು ಹಣದ ಕೊರತೆಯಿಂದ ಜೈಲಿನಲ್ಲಿಲ್ಲೇ ಉಳಿದಿದ್ದ ಲಕ್ಷ್ಮೀ ತಳವಾರ ಎಂಬ ಮಹಿಳೆಗೆ ಅಧಿಕಾರಿಗಳು, ವಕೀಲರು ಹಾಗೂ ಸಮಾಜಸೇವಕರ ಸಹಕಾರದ ಪ್ರಯತ್ನದಿಂದ ಕೊನೆಗೂ ಬಿಡುಗಡೆ ಭಾಗ್ಯ ಲಭಿಸಿದೆ.

ಜೈಲಿನಲ್ಲಿಲ್ಲೇ ಉಳಿದಿದ್ದ ಲಕ್ಷ್ಮಿ ತಳವಾರ ಎಂಬ ಮಹಿಳೆಯ ಬಿಡುಗಡೆಗೆ ವಕೀಲರಾದ ವಿದ್ಯಾ ಕೋಟಿ ಆರಂಭದಲ್ಲಿ ಅಗತ್ಯವಿದ್ದ ಅರ್ಧದಷ್ಟು ಹಣ ಹೊಂದಿಸಿ ಸಹಾಯಕ್ಕೆ ಮುಂದಾದರು. ಪರಿಸ್ಥಿತಿಯನ್ನು ಮನಗಂಡ ಜೈಲು ಅಧೀಕ್ಷಕ ಕೃಷ್ಣಮೂರ್ತಿ, ಎಎಸ್‌ಟಿ ಸೂಪರಿಂಟೆಂಡೆಂಟ್ ಮಲಿಕಾರ್ಜುನ್ ಕೊಣ್ಣೂರ ಹಾಗೂ ಇತರೆ ಸಿಬ್ಬಂದಿಗಳು ಮಾಜಿ ಮೇಯರ್ ವಿಜಯ್ ಮೋರೆ ಅವರ ಗಮನಕ್ಕೆ ತಂದರು.
ಮದನಕುಮಾರ ಭೈರಪ್ಪನವರ್ ಮತ್ತು ಪ್ರಸನ್ನ ಘೋಟಗೆ ಅವರು ಸಹಾಯ ಮಾಡಿದ್ದು, ಮಾಜಿ ಮಹಾಪೌರ ವಿಜಯ ಮೋರೆ ಇವರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದರು.
ನಂದು ಪಿವಿಜಿ, ಅಲನ್ ವಿಜಯ್ ಮೋರೆ, ಅದ್ವೈತ್ ಚವ್ಹಾಣ ಪಾಟೀಲ್ ಸೇರಿದಂತೆ ಇನ್ನುಳಿದವರು ಈ ವೇಳೆ ಭಾಗಿಯಾಗಿದ್ಧರು.