ಕಾಗವಾಡ :ಕಾಗವಾಡದಲ್ಲಿ ಸುಮಾರು 10 ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸುತ್ತಿರುವ ಪ್ರಜಾಸೌಧ ಕಟ್ಟಡದ ಸ್ಥಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪರಿಶೀಲಿಸಿದರು.
ಶುಕ್ರವಾರ ಸಂಜೆ ಕಾಗವಾಡದಲ್ಲಿ ಪ್ರಜಾಸೌಧ ಕಟ್ಟಡದ ಸ್ಥಳ ವೀಕ್ಷಿಸಿದರು. ಎಲ್ಲ ಕಟ್ಟಡಗಳು ಇಲ್ಲಿ ನಿರ್ಮಿಸಿರಿ ಎಂದು ಸೂಚನೆ ನೀಡಿದರು. ಕಾಗವಾಡ ಶಾಸಕ ರಾಜು ಕಾಗೆ ಅವರು ಸಚಿವರಿಗೆ ಕಟ್ಟಡ ಬಗ್ಗೆ ಮಾಹಿತಿ ನೀಡಿದರು. ಶೀಘ್ರದಲ್ಲೇ ಕಟ್ಟಡ ಪ್ರಾರಂಭಿಸಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರೊಂದಿಗೆ ಮಾಜಿ ಸಚಿವ ವೀರಕುಮಾರ್ ಪಾಟೀಲ್ , ಗಜಾನನ ಮಂಗಸೂಳಿ ಸೇರಿದಂತೆ ಅಧಿಕಾರಿ ಜಯಾನಂದ ಹಿರೇಮಠ್ ತಹಸಿಲ್ದಾರ್ ರಾಜೇಶ್ ಬುರ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ, ಸಿ ಡಿ ಪಿ ಓ ಸಂಜು ಕುಮಾರಸ್ವಾಮಿಗೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.