ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ 2026 ರಲ್ಲಿ 41 ವರ್ಷಗಳ ಬಳಿಕ ಗ್ರಾಮದೇವತೆ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ದೇವಸ್ಥಾನ ಪಂಚ ಕಮೀಟಿಯೂ ಗ್ರಾಮ ಪಂಚಾಯಿತಿಗೆ ಮನವಿಯನ್ನು ಸಲ್ಲಿಸಿತು.

ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ, ಬೀದಿ ದೀಪ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಲ್ಲದೇ ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ಣಗೊಳಿಸಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಪಿಡಿಓಗೆ ಮನವಿಯನ್ನು ಸಲ್ಲಿಸಲಾಯಿತು. ಅಲ್ಲದೇ ಎಲ್ಲರೂ ಸಭೆ ಸೇರಿ ದಿನಾಂಕವನ್ನು ನಿರ್ಣಯಿಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ವೇಳೆ ಯಲ್ಲಪ್ಪ ಪಾಟೀಲ, ಅಧ್ಯಕ್ಷ ಮಾರುತಿ ರಾಮಚಂದ್ರ ಪಾಟೀಲ, ಉಪಾಧ್ಯಕ್ಷ ಸದಸ್ಯ ಮಲ್ಲಪ್ಪ ಶಾಂತಾರಾಮ ಪಾಟೀಲ, ಶಂಕರನಾರಾಯಣ ಪಾಟೀಲ ಮಾರುತಿ ನಾಗಪ್ಪ ಪಾಟೀಲ, ಶಂಕರ ಅರ್ಜುನ ಪಾಟೀಲ, ಯಲ್ಲಪ್ಪ ದೇವಪ್ಪ ಹಜೌ, ರಾಜು ಲಕ್ಷ್ಮಣ ಚವ್ಹಾಣ, ಮಹಾದೇವ ಭುಜಂಗ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯರಾದ ಎಲ್.ಜಿ.ಪಾಟೀಲ ಸದಸ್ಯ ಸುರೇಶ ರಾಠೋಡ್, ಪ್ರಶಾಂತ ಪವಾರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.