ಮಾನವಿಯತೆಯನ್ನು ಮರೆತು ಕಿರುಕುಳ ನೀಡುತ್ತಿರುವ ಫೈನಾನ್ಸ ಕಂಪನಿಗಳ ಸಿಬ್ಬಂದಿಗಳನ್ನು ಜೈಲಿಗೆ ಹಾಕಿ ಅವರ ಲೈಸೆನ್ಸ್ ರದ್ಧುಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಸರ್ಕಾರವನ್ನು ಒತ್ತಾಯಿಸಿದರು.

ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಕೆ.ಡಿ.ಪಿ ಸಭೆಯನ್ನು ಕರೆಯಲಾಗಿತ್ತು. ವೇದಿಕೆಯ ಮೇಲೆ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಸರ್ಕಾರದ ಮುಖ್ಯಸಚೇತಕರಾದ ಪ್ರಕಾಶ್ ಹುಕ್ಕೇರಿ, ಶಾಸಕ ರಾಜು ಕಾಗೆ, ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ ಗುಳೇದ ಸೇರಿದಂತೆ ಇನ್ನುಳಿದ ಅಧಿಕಾರಿಗಳು ಉಪಸ್ಥಿತರಿದ್ಧರು.
ಶಾಸಕ ರಾಜು ಕಾಗೆ ಅವರು ಜನರಲ್ಲಿ ಮೈಕ್ರೋ ಫೈನಾನ್ಸಗಳಿಂದ ಬೇರೆಯವರು ತಮ್ಮ ಹೆಸರಿನಲ್ಲಿ ಸಾಲ ಪಡೆದು ವಂಚಿಸುವ ಪ್ರಕರಣಗಳ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಎಂದರು.
ಮೈಕ್ರೋ ಫೈನಾನ್ಸನವರ ಕಿರುಕುಳಕ್ಕೆ ಸಂಬಂಧಿಸಿದಂತೆ ಪಡೆದ ಸಾಲ ಮರು ಪಾವತಿಸಲು ಫೈನಾನ್ಸನವರ ಸಮಯಾವಕಾಶ ನೀಡಬೇಕು. ಕಿರುಕುಳ ನೀಡಿದರೇ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು. ಇದೇ ವೇಳೆ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ ಅವರು ಒಂದು ತಿಂಗಳ ಬಾಣಂತಿಯನ್ನು ನವಜಾತ ಶಿಶುವಿನೊಂದಿಗೆ ಮನೆಯಿಂದ ಹೊರ ಹಾಕುವಂತಹ ಹಲವಾರು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಇದನ್ನು ಒಪ್ಪಿಕೊಳ್ಳುತ್ತದೆಯಾ? ಮೀಟರ್ ದಂಧೆ ಮಾಡುವವರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಪ್ರಶ್ನಿಸಿದರು. ಮನುಷ್ಯತ್ವವಿಲ್ಲದೇ ಉದ್ಧಟತನ ಪ್ರದರ್ಶಿಸುತ್ತಿರುವ ಫೈನಾನ್ಸನವರನ್ನು ಜೈಲಿಗೆ ಹಾಕಿ ಕಠಿಣ ಕ್ರಮಕೈಗೊಂಡು ಅವರ ಲೈಸೆನ್ಸ ರದ್ಧುಗೊಳಿಸಬೇಕು.
ಇನ್ನು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿಯವರು ಕೆಲವೆಡೆ ಜನರಿಂದ ಮೋಸವಾದರೇ, ಕೆಲವೆಡೆ ಅಧಿಕಾರಿಗಳಿಂದಲೇ ಮೋಸ ಮಾಡುಗುತ್ತಿದೆ ಎಂದರು. ಇನ್ನು ಜಿಲ್ಲಾಧಿಕಾರಿಗಳು ಮಾತನಾಡಿದ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸುಮಾರು 50 ಫೈನಾನ್ಸಗಳ ಸಭೆಯನ್ನು ನಡೆಸಲಾಗಿದೆ. ಈ ವೇಳೆ ಮಹಿಳೆಯರು ಫೈನಾನ್ಸನಿಂದ ಸಾಲ ಪಡೆದು ಹೆಚ್ಚಿನ ಬಡ್ಡಿದರಕ್ಕಾಗಿ ಬೇರೆಯವರಿಗೆ ಸಾಲ ನೀಡಿ ಮೋಸಕ್ಕೆ ಒಳಗಾಗಿರುವುದು ಕಂಡು ಬಂದಿದೆ. ಅವರಿಗೆ ಸಾಲ ತೀರಿಸಲೂ 3 ತಿಂಗಳು ಫೈನಾನ್ಸನವರು ಸಮಯಾವಕಾಶವನ್ನು ನೀಡಿದ್ದಾರೆ.
ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ ಗುಳೇದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಫೈನಾನ್ಸ ಕಂಪನಿಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೋಸದಿಂದ ಜನರನ್ನು ವಂಚಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೇ ಮೈಕ್ರೋ ಫೈನಾನ್ಸನವರಿಗೆ ಕಿರುಕುಳ ನೀಡದಂತೆ ಸೂಚಿಸಲಾಗಿದೆ. ಬೇರೆಯವರು ತಮ್ಮ ಹೆಸರಲ್ಲಿ ಸಾಲ ಪಡೆದು ತೀರಿಸುತ್ತೇವೆಂದಾಗ ಗ್ರಾಹಕರು ಒಪ್ಪಿ ಮೋಸಕ್ಕೆ ಒಳಗಾಗಬಾರದು ಎಂದರು.