Belagavi

ನಾಳೆ ಬೆಳಗಾವಿಯಲ್ಲಿ ಜೈ ಬಾಪೂ, ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮ

Share

 

ನಾಳೆ ಬೆಳಗಾವಿಯಲ್ಲಿ ನಡೆಯಲಿರುವ ಜೈ ಬಾಪೂ, ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮದ ಹಿನ್ನೆಲೆ ಖಡಕ್ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗುತ್ತಿದೆ. ಸುಮಾರು 3500 ಜನ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.

ಮಹಾತ್ಮಾ ಗಾಂಧಿಜೀಯವರು 1924 ರಲ್ಲಿ ಬೆಳಗಾವಿ ನಗರದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಹಿನ್ನೆಲೆ ಕಳೆದ ಡಿಸೆಂಬರ್ 26 ಮತ್ತು 27 ರಂದು ನಡೆಯಬೇಕಿದ್ದ ಸಮಾರಂಭವನ್ನು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ, ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ನಿಧನ ಹಿನ್ನೆಲೆ ಮುಂದೂಡಿಕೆ ಮಾಡಿತ್ತು. ನಾಳೆ ಜನವರಿ 21 ರಂದು ಬೆಳಗಾವಿಯ ಸಿ.ಪಿ.ಎಡ್. ಮೈದಾನದಲ್ಲಿ ಈ ಕಾರ್ಯಕ್ರಮ ಮತ್ತೇ ನಡೆಯುತ್ತಿದೆ. ಈ ಹಿನ್ನೆಲೆ ನಗರದೆಲ್ಲೆಡೆ ಸ್ವಾಗತ ಫಲಕಗಳು, ಬ್ಯಾನರಗಳು ಮತ್ತೊಮ್ಮೆ ರಾರಾಜಿಸುತ್ತಿವೆ.

ಅಲ್ಲದೇ ಸುವರ್ಣಸೌಧದ ಎದುರು ಮಹಾತ್ಮಾ ಗಾಂಧಿಜೀಯವರ ಮೂರ್ತಿ ಅನಾವರಣ ಮತ್ತು ಜೈ ಬಾಪೂ, ಜೈ ಭೀಮ್ ಮತ್ತು ಜೈ ಸಂವಿಧಾನ ಕಾರ್ಯಕ್ರಮಕ್ಕಾಗಿ ಬೆಳಗಾವಿಯ ಸಿ.ಪಿ.ಎಡ್. ಮೈದಾನದಲ್ಲಿ ಪೂರ್ವ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ಪೂರ್ಣಗೊಂಡಿದ್ದು, ನಗರದಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೇ ಭದ್ರತೆಗಾಗಿ ಸುಮಾರು 3500 ಜನರು ನಿಯೋಜನೆಗೊಂಡಿದ್ದಾರೆ. ಇಂದು ಈ ಪೊಲೀಸ್ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಮಾರ್ಗದರ್ಶನವನ್ನು ಮಾಡಿದರು.

Tags:

error: Content is protected !!