ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಮೈಕ್ರೋ ಫೈನಾನ್ಸನವರು ಬಾಣಂತಿ ಮತ್ತು ನವಜಾತ ಶಿಶುವನ್ನು ಹೊರಗಟ್ಟಿ ಮನೆ ಸೀಜ್ ಮಾಡಿದ್ದರು. ಇದನ್ನ ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಫೈನಾನ್ಸನವರೊಂದಿಗೆ ಮಾತನಾಡಿ ಸೀಜ್ ಮಾಡಿದ ಮನೆಯ ಬೀಗವನ್ನು ತೆಗೆಸಿ ಮಾನವಿಯತೆ ಮೆರೆದಿದ್ದಾರೆ.

ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಮೈಕ್ರೋ ಫೈನಾನ್ಸನವರು ಬಾಣಂತಿ ಮತ್ತು ನವಜಾತ ಶಿಶುವನ್ನು ಹೊರಗಟ್ಟಿ ಮನೆ ಸೀಜ್ ಮಾಡಿದ್ದರು. ಇದರಿಂದಾಗಿ ಗಣಪತ ಲೋಹಾರ್ ಅವರ ಕುಟುಂಬ ಬೀದಿಗೆ ಬಂದಿತ್ತು. ಏಕಾಏಕಿ ಮನೆ ಸೀಜ್ ಮಾಡಿದ್ದರಿಂದ ಕುಟುಂಬದವರು ಕಣ್ಣೀರು ಹಾಕಿದ್ದರು. ಈ ಸುದ್ಧಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ತಮ್ಮ ಕ್ಷೇತ್ರದಲ್ಲೇ ಮಹಿಳೆಯರ ಮೇಲೆ ಅನ್ಯಾಯವಾಗಿರುವುದನ್ನ ಅರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸಹಾಯಕ್ಕೆ ಧಾವಿಸಿದ್ದಾರೆ. ತಮ್ಮ ಆಪ್ತ ಸಹಾಯಕ ಮಹಾಂತೇಶ ಹಿರೇಮಠ ಅವರು ಖಾಸಗಿ ಹಣಕಾಸು ಸಂಸ್ಥೆಯವರ ಜೊತೆ ಮಾತನಾಡಿ ಮನೆಯ ಬೀಗ ತೆಗೆಸಿ ಬಾಣಂತಿ ಹಾಗೂ ಕುಟುಂಬವನ್ನು ಮನೆಯೊಳಗೆ ಸೇರಿಸಿದ್ದಾರೆ. ಅಲ್ಲದೇ ಅವರಿಗೆ ದಿನಸಿ ಮತ್ತು ಆರ್ಥಿಕ ನೆರವನ್ನು ನೀಡಿದ್ದಾರೆ.
ಇನ್ನು ಲೋಹಾರ್ ಕುಟುಂಬದವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.