ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಸಾಮಾಜಿಕ ಭದ್ರತಾ ಯೋಜನೆಗಳು ಸರ್ಕಾರಿ ಸಿಬ್ಬಂದಿಗಳಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಯೋಜನೆ ಅನುಷ್ಠಾನಗೊಳಿಸಲು ಪ್ರತಿಯೊಬ್ಬರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಹಾಗೂ ಅಟಲ್ ಪೆನ್ಷನ್ ಯೋಜನೆಗಳ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ಯೋಜನೆ ಯಶಸ್ವಿಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕಾಗವಾಡ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರಣ್ಣ ವಾಲಿ ಕರೆ ನೀಡಿದರು.
ಗುರುವಾರ ರಂದು ಕಾಗವಾಡದ ಸಿಡಿಪಿಓ ಕಚೇರಿಯಲ್ಲಿ ಸರ್ಕಾರಿ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು ಸಭೆಯಲ್ಲಿ ವೀರಣ್ಣ ವಾಲಿ ಮಾಹಿತಿ ನೀಡಿದರು. ಪ್ರತಿಯೊಬ್ಬರಿಗೆ ವಿಮ ತೆಗೆದುಕೊಳ್ಳುವುದು ಅವಶ್ಯಕತೆ ಇದೆ ಕಾರಣ ಆತನ ಸಾವು ಅವರ ಕೈಯಲ್ಲಿ ಇಲ್ಲ ಜೀವನ ಸುರಕ್ಷತೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಯೋಜನೆಗಳು ಘೋಷಿಸಿದ್ದು ಯಶಸ್ಸು ಗಳಿಸುವುದು ಪ್ರತಿಯೊಬ್ಬರ ಜವಾಬ್ಧರಾಗಿದಿಯೆಂದು ಹೇಳಿದರು.
ತಾಲೂಕಿನ ಅಮುಲ್ಯ ಆರ್ಥಿಕ ಸಂರಕ್ಷತಾ ಕೇಂದ್ರ ಅಥಣಿ ಆಪ್ತಸಮಾಲೋಚಕ ಬಸಪ್ಪ ಬೊಮನಾಳ ಇವರು ಮಾತನಾಡಿ ಕೇಂದ್ರ ಸರಕಾರದ ಆದೇಶ ಮೇರೆಗೆ ಅಥಣಿ ಆರ್ಥಿಕ ಸಾಕ್ಷರತಾ ಕೇಂದ್ರ ಮತ್ತು ಸಿ.ಎ.ಪಿ.ಎಲ್. ಸೆಂಟರ್ ವತಿಯಿಂದ ತಾಲೂಕಾ ಪಂಚಾಯತ ಕಾಗವಾಡ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದೀ ಇಲಾಖೆ ಈ ಒಂದು ಎಲ್ಲ ಇಲಾಖೆಗಳ ಸಹಯೋಗದಲ್ಲಿ ಒಂದು ಸಾಮಾಜಿಕ ಭದ್ರತಾ ಯೋಜನೆಯ ಬಗ್ಗೆ ನಾವು ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಸರಕಾರ ಯೋಜನೆಗಳನ್ನು ಕೊಟ್ಟಿದೆ ಪ್ರಧಾನ ಮಂತ್ರಿ ಜೀವ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಅಟಲ ಪೆನನ್ಷ ಯೋಜನೆ ಈ ಮೂರು ಯೋಜನೆ ಜಾರಿಗೆ ತಂದಿದ್ದು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ ೧೮ ರಿಂದ ೭೦ ವಯಸ್ಸಿಗೆ ರೂ. ೨೦/- ಇನಸುರೆನ್ಸ ಮೊತ್ತ ತುಂಬುವುದು, ಇವರಿಗೆ ಅಪಘಾತ ಆದಲ್ಲಿ ರೂ. ೨ ಲಕ್ಷ ರೂ ಪರಿಹಾರ ಸಿಗುತ್ತದೆ. ಮತ್ತು ಅ ಮಂತ್ರಿ ಜೀವನ ಜ್ಯೋತಿ ಯೋಜನೆಯಲ್ಲಿ ೧೮ ರಿಂದ ೫೦ ವಯಸ್ಸಿಗೆ ರೂ. ೨೦/- ಇನಸುರೆನ್ಸ ಮೊತ್ತ ತುಂಬುವುದು, ಇವರಿಗೆ ಅಪಘಾತದೊಂದಿಗೆ ಹಾಗೂ ಸಾಮಾನ್ಯವಾಗಿ ಸಾವು ಹೊಂದಿದರೆ ರೂ. ೨ ಲಕ್ಷ ರೂ ಪರಿಹಾರ ಸಿಗುತ್ತದೆ. ಹಾಗೂ ಅಟಲ್ ಪೆನನ್ಷ ಯೋಜನೆಯಲ್ಲಿ ಇದೇ ವಯಸ್ಸಿನ ಗ್ರಾಹಕರು ಯೋಜನೆ ಲಾಭ ತೆಗೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಡಿಪಿಓ ಸಂಜುಕುಮಾರ ಸದಲಗೆ, ತಾಲೂಕಾ ಪಂಚಾಯತ ಅಧಿಕಾರಿ ಎ.ಡಿ.ಅನಸಾರಿ, ಕೆನರಾ ಬ್ಯಾಂಕಿ ಮ್ಯಾನೇಜರ ಯಶವಂತ ಕಾಂಬಳೆ, ಕೆ.ವಿ.ಜಿ.ಬ್ಯಾಂಕಿ ಮ್ಯಾನೇಜರ ಮೋಹಮ್ಮದ ಮಾಂಜರೆ ಸೇರಿದಂತೆ ಇನ್ನಿತರರು ಅಧಿಕಾರಿಗಳು ಸರಕಾರಿ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.