Hukkeri

ಜಗತ್ತಿನಲ್ಲಿ ಧರ್ಮ ಉಳಿದಿದ್ದರೆ ಸನ್ಯಾಸಿಗಳಿಂದ ಮಾತ್ರ – ವಿನಯ ಗುರೂಜಿ.

Share

ಪ್ರಪಂಚದಲ್ಲಿ ಧರ್ಮ ಉಳಿಯಬೇಕಾದರೆ ಸನ್ಯಾಸಿಗಳಿಂದ ಮಾತ್ರ ಸಾಧ್ಯವಾಗಿದೆ ಎಂದು ಗೌರಿಗದ್ದೆ ಅವಧೂತ ವಿನಯ ಗುರೂಜಿ ಅಭಿಪ್ರಾಯ ಪಟ್ಟರು.
ಅವರು ಇಂದು ಹುಕ್ಕೇರಿ ನಗರದಲ್ಲಿ ಹುಕ್ಕೇರಿಶರ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣದ ಚಿಕ್ಕೋಡಿ ರಸ್ತೆಯ ರೇಣುಕಾ ನಗರದ ಶ್ರೀ ಗುರುಶಾಂತೇಶ್ವರ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ತ್ರೀನೇತ್ರ ಮಹಾಂತ ಶಿವಯೋಗಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಗಣ್ಯರನ್ನು ಮತ್ತು ಶ್ರೀಗಳನ್ನು ಸ್ವಾಗತಿಸಿ ಆಶಿರ್ವದಿಸಿದರು.
ವೇದಿಕೆ ಮೇಲೆ ತಹಸಿಲ್ದಾರ ಮಂಜುಳಾ ನಾಯಿಕ, ಬಿ ಇ ಓ ಪ್ರಭಾವತಿ ಪಾಟೀಲ, ಅಕ್ಷರ ದಾಸೂಹ ನಿರ್ದೆಶಕಿ ಸವಿತಾ ಹಲಕಿ, ಬಿ ಆರ್ ಸಿ ಎ ಎಸ್ ಪದ್ಮಣ್ಣವರ, ಸಿ ಆರ್ ಪಿ ವಿನಾಯಕ ರಜಪೂತ, ಸಂಪತ್ ಕುಮಾರ, ಎಸ್ ಬಿ ಜಿನರಾಳೆ ಉಪಸ್ಥಿತರಿದ್ದರು.

ನಂತರ ಮಾಜಿ ಸುಭೇದಾರ ಮೇಜರ ಉಮೇಶ ಜೀನರಾಳೆ ದಂಪತಿಗಳನ್ನು ಸತ್ಕರಿಸಿ ಅಭಿನಂದಿಸಲಾಯಿತು.
ವಿನಯ ಗುರೂಜಿ ಮಾತನಾಡಿ ದೇಶದಲ್ಲಿ ಧರ್ಮ ಉಳಿಯಬೇಕಾದರೆ ಸನ್ಯಾಸಿಗಳಿಂದ ಮಾತ್ರ ಸಾಧ್ಯವಾಗುತ್ತದೆ ವಿಷೇಶವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆಸ್ಪತ್ರೆ,ಶಿಕ್ಷಣ ಸಂಸ್ಥೆಗಳು ಮಠ ಮಾನ್ಯಗಳಿಂದ ನಡೆಯುತ್ತಿವೆ ನಮ್ಮ ಸಂಸ್ಕೃತ, ಭಕ್ತಿ ಭಾವ ಸಂಸ್ಕಾರಗಳು ಗುರುಗಳಿಂದ ಪಡೆಯಬಹುದು ಆದ್ದರಿಂದ ದೇಶ ವಿದೇಶದಲ್ಲಿಯೂ ಕೂಡ ಧರ್ಮದ ನೆಲೆಊರಿದೆ ಎಂದರು.

ನಂತರ ಪ್ರತಭಾವಂತ ವಿದ್ಯಾರ್ಥಿಗಳಿಗೆ ಪಾರತೋಷಕ ನೀಡಿ ಗೌರವಿಸಲಾಯಿತು. ಡಾ, ತ್ರೀನೇತ್ರ ಮಹಾಂತ ಶಿವಯೋಗಿ ಮಾತನಾಡಿ ಭಾರತ ಎಂದರೆ ಭಾವನಾತ್ಮಕವಾಗಿ ಪ್ರೀತಿಸುವ ದೇಶ , ಎಲ್ಲರನ್ನು ತಾರತಮ್ಯೆ ಇಲ್ಲದೆ,ರಾಗ ದ್ವೇಶ ವಿಲ್ಲದೆ ಇರುವ ರಾಷ್ಟ್ರ ಅದು ಭಾರತ ಸಂಹಿಷ್ಣತೆ ಇರುವ ದೇಶ ಭಾರತ ಒಂದೆ ಎಂದರು.
ಈ ಸಂದರ್ಭದಲ್ಲಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಹಿರೇಮಠದ ಭಕ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!