ಹುಕ್ಕೇರಿ ತಾಲೂಕಿನ ವಿವಿಧ ಗ್ರಾಮಗಳ ಜನತೆಯ ವಿವಿಧ ರೋಗಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷದೋಪಚಾರ ನಿಡಲಾಗುತ್ತಿದೆ ಎಂದು ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಸದಸ್ಯ ಓಂಕಾರ ಹೆದ್ದೂರಶೆಟ್ಟಿ ಹೇಳಿದರು.
ಪಟ್ಟಣದ ಶಿಕ್ಷಣ ಪ್ರೇಮಿ ದಿವಂಗತ ರವಿಂದ್ರ ಶೆಟ್ಟಿ ಯವರ ಐದನೇ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡ ಉಚಿತ ಚಿಕಿತ್ಸಾ ಶಿಬಿರವನ್ನು ಎಸ್ ಕೆ ಪಬ್ಲಿಕ್ ಶಾಲೆಯಯಲ್ಲಿ ಎಸ್ ಎಸ್ ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೆಳೆಯರ ಬಳಗ , ಸಿ ಆರ್ ಶೆಟ್ಟಿ ಫೌಂಡೆಶನ್ ಮತ್ತು ಸಿದ್ದಗೀರಿ ಆಸ್ಪತ್ರೆ ಕನ್ನೆರಿ ಮಠ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಸಮಾರಂಭವನ್ನು ಶ್ರೀಮತಿ ನೀಲಾಂಬಿಕಾ ಶೇಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಶಿವಾನಂದ ನೂಲಿ, ಸಿದ್ದೇಶ್ವರ ಹೆದ್ದೂರಶೆಟ್ಟಿ, ವಾಗ್ದೇವಿ ತಾರಳಿ, ನದಾಫ್, ರವದಿ, ಹಿರೇಮಠ ,ತಮ್ಮಣ್ಣಾ ಪಾಟೀಲ, ಸೋಮ ಗಂಧ ಉಪಸ್ಥಿತರಿದ್ದರು.
ನಂತರ ಆಯೋಜಕರಿಂದ ವೈದ್ಯರಿಗೆ ಸತ್ಕರಿಸಿ ಅಭಿನಂದಿಸಲಾಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ಆಯೋಜಕ ಎಸ್ ಕೆ ಪಬ್ಲಿಕ್ ಶಾಲೆ ಅದ್ಯಕ್ಷ ಪಿಂಟು ಶೇಟ್ಟಿ ನಮ್ಮ ತಂದೆಯವರ 5 ನೇ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಹೃದಯ ಸಂಬಂಧಿ ಕಾಯಿಲೆ, ಕಣ್ಣು ತಪಾಸಣೆ, ದಂತ, ಕಿಡ್ನಿ, ಕ್ಯಾನ್ಸರ್ ರೋಗಿಗಳಿಗೆ ತಪಾಸಣೆ ಮಾಡಲಾಗುತ್ತಿದೆ ಎಂದರು.
ಶಿಬಿರದ ಮೆಲುಸ್ತುವಾರಿಯನ್ನು ಮಹಾಂತೇಶ ವಸ್ರ್ತದ, ರವಿ ಪರಕನಟ್ಟಿ, ಬಸವರಾಜ ನಂದಿಕೋಲಮಠ, ಚನ್ನಪ್ಪ ಗಜಬರ, ಸೋಮ ಪರಕನಟ್ಟಿ, ಪ್ರಸಾದ ಹಂದಿಗುಂದ, ಗೀರಿಶ ಪಾಟೀಲ, ಶಂಕರ ಅಲಗರಾವುತ ವಹಿಸಿಕೊಂಡಿದ್ದರು.
ಎಸ್ ಕೆ ಪಬ್ಲಿಕ್ ಶಾಲೆ ಆಡಳಿತ ಮಂಡಳಿ ಸದಸ್ಯ ಓಂಕಾರ ಹೆದ್ದೂರಶೆಟ್ಟಿ ಮಾತನಾಡಿ ಇಂದು ನಡೆಯುತ್ತಿರುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು ಐದ ನೂರಕ್ಕಿಂತಲೂ ಹೇಚ್ಚು ವಿವಿಧ ಕಾಯಿಲೆಗಳ ರೋಗಿಗಳಿಗೆ ತಪಾಸಣೆ ಮಾಡಲಾಗುತ್ತಿದೆ ಅವಶ್ಯ ವಿದ್ದಲ್ಲಿ ಔಷಧ ಮತ್ತು ಹೆಚ್ಚಿನ ಚಿಕಿತ್ಸೆ ನಿಡಲಾಗುವದು ಎಂದರು.
ಈ ಸಂದರ್ಭದಲ್ಲಿ ಅಶೋಕ ಹಿರೇಮಠ, ವಿರೇಶ ಗಜಬರ, ಅನಿಲ ತಿಬಲೆ ಹಾಗೂ ಸಿ ಎಸ್ ತುಬಚಿ ಶಿಕ್ಷಣ ಸಂಸ್ಥೆ ಪ್ರಾಚಾರ್ಯರಾದ ರಾಘವೇಂದ್ರ ಕುಲಕರ್ಣಿ, ಎಸ್ ಎಸ್ ಕಮತಗಿ, ಎಸ್ ಆರ್ ಘಸ್ತಿ, ಪಿ ಎಸ್ ನೆರ್ಲೆಕರ, ಬಿ ಎಲ್ ನಾಯಿಕ, ಸಿ ಬಿ ತುಪ್ಪದ ಮೊದಲಾದವರು ಶಿಬಿರವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿ ಯಶಸ್ವಿ ಗೊಳಿಸಿದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ