Hukkeri

ಎಸ್ ಸಿ, ಎಸ್ ಟಿ ಕಾಯ್ದೆ ಕುರಿತು ಜಾಗೃತಿ ಅವಶ್ಯ – ಎಚ್ ಎ ಮಾಹುತ್.

Share

ಪರಶಿಷ್ಟ ವರ್ಗಗಳ ಮತ್ತು ಪರಶಿಷ್ಟ ಪಂಗಡ ಕಾಯ್ದೆಗಳ ಕುರಿತು ಹುಕ್ಕೇರಿ ತಾಲೂಕಿನಲ್ಲಿ ಜಾಗೃತೆ ಮೂಡಿಸಲಾಗುವದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಎಚ್ ಎ ಮಾಹುತ ಹೇಳಿದರು.

ಅವರು ಇಂದು ಹುಕ್ಕೇರಿ ನಗರದ ಡಾ, ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಹಮ್ಮಿಕೊಂಡ ಪರಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಮತ್ತು ಕಾಯ್ದೆ ಕುರಿತು ಜಾಗ್ರತೆ ಮೂಡಿಸಲು ಹಮ್ಮಿಕೊಂಡ ಬೀದಿ ನಾಟಕ ಮತ್ತು ಕ್ರಾಂತಿಕಾರಿ ಗೀತೆಗಳ ಕಾರ್ಯಕ್ರಮವನ್ನು ಜಿಲ್ಲಾ ದೌರ್ಜನ್ಯ ಸಮಿತಿ ಸರಕಾರೇತರ ಸದಸ್ಯ ಕರೆಪ್ಪಾ ಗುಡೆನ್ನವರ ಮತ್ತು ರಮೇಶ ಹುಂಜಿ ಚಾಲನೆ ನೀಡಿದರು.
ನಂತರ ಮಾತನಾಡಿದ ದಲಿತ ಮುಖಂಡ ಉದಯ ಹುಕ್ಕೇರಿ ಕರ್ನಾಟಕ ಸರಕಾರ ಮತ್ತು ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ರವರು ಸಂವಿಧಾನದಲ್ಲಿ ತಿಳಿಸಿರುವ ಹಲವಾರು ವಿಷಯಗಳ ಕುರಿತು ಜಾಗ್ರತೆ ಮೂಡಿಸುವ ಉದ್ದೇಶ ದಿಂದ ಇಂದು ಹುಕ್ಕೇರಿ ತಾಲೂಕಿನಲ್ಲಿ ಕಲಾ ತಂಡಗಳ ಮೂಕಾಂತರ ಪ್ರದರ್ಶನ ಮಾಡಲಾಗುತ್ತಿದೆ ಎಂದರು .

ನಂತರ ಕಲಾವಿದರು ನಾಟಕ ಮತ್ತು ಕ್ರಾಂತಿಕಾರಿ ಗೀತೆಗಳ ಮೂಲಕ ಜಾಗ್ರತೆ ಮೂಡಿಸಿದರು.
ಹುಕ್ಕೇರಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಎಚ್ ಎ ಮಾಹುತ ಮಾತನಾಡಿ ಹುಕ್ಕೇರಿ ನಗರದಲ್ಲಿ ದಲಿತ ಮತ್ತು ಸರ್ಕಾರೇತರ ಸದಸ್ಯರ ಸಮ್ಮುಖದಲ್ಲಿ ದಲಿತರ ಮೇಲಾಗುವ ದೌರ್ಜನ್ಯ ಮತ್ತು ಅವುಗಳ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೋಳಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸದಾ ಕರೆಪ್ಪಗೋಳ, ಶಶಿಕಾಂತ ಹೊನ್ನಳ್ಳಿ, ಬಿ ಕೆ ಸದಾ, ಗೀತಾ ಸನ್ನಕ್ಕಿ, ಅಲ್ಲಾಭಕ್ಷ ಮುಲ್ಲಾ, ಕೀರಣ, ಸತ್ಯಪ್ಪಾ ಮ್ಯಾಗೇರಿ, ವಸಂತ ಹಾಗೂ ಬೆಂಗಳೂರಿನ ದಲಿತ ಕಲಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.

Tags:

error: Content is protected !!