ಧಾರವಾಡ ರಾಷ್ಟ್ರೀಯ ಹೆದ್ದಾರಿಯ ಮಾರ್ಗವಾಗಿ ಪೇಂಟಿಂಗಗೆ ಬಳಸುತ್ತಿದ್ದ ತಿನ್ನರ ಸಾಗಿಸುತ್ತಿದ್ದ ಬೃಹತ್ ಟ್ಯಾಂಕರ್ ಚಾಲಕನ ನಿಂತ್ರಣ ತಪ್ಪಿಪಲ್ಟಿಯಾದ ಘಟನೆ ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇನ್ನೂ ಪಲ್ಟಿಯಾದ ಟ್ಯಾಂಕರ್‌ನಲ್ಲಿ ಪೇಂಟಿಂಗಗೆ ಬಳಕೆ ಮಾಡುವ ತಿನ್ನರ್ ಇದ್ದು, ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ತಿನ್ನರ್ ರಸ್ತೆಗೆ ಹರಿಯುತ್ತಿದ್ದ, ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಘಟನೆಯಲ್ಲಿ ಲಾರಿಯ ಚಾಕರಿಬ್ಬರಿಗೆ ಗಾಯವಾಗಿದ್ದು, ಸ್ಥಳೀಯರ ರಕ್ಷಣೆ ಮಾಡಿ ಉಪ್ಪಚರಿಸಿದ್ದಾರೆ.
ಇನ್ನೂ ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಈಗಷ್ಟೇ ಘಟನೆ ನಡೆದಿದ್ದು, ಗಾಯಾಳುಗಳ ವಿವರ ದುರ್ಘಟನೆಗೆ ನಿಖರ ಕಾರಣ ಪೊಲೀಸರ ಪ್ರಾಥಮಿಕ ತನಿಖೆಯ ನಂತರವಷ್ಟೇ ತಿಳಿದು ಬರಬೇಕಾಗಿದೆ..