Belagavi

ಬೆಳಗಾವಿಯಲ್ಲಿ ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆ ಜಯಂತಿ

Share

ಬೆಳಗಾವಿಯ ಶಿವಸೇನೆ ಮಧ್ಯವರ್ತಿ ಕಾರ್ಯಾಲಯದಲ್ಲಿ ಹಿಂದೂ ಹೃದಯ ಸಾಮ್ರಾಟ ಬಾಳಾಸಾಹೇಬ್ ಠಾಕ್ರೆ ಅವರ ಜಯಂತಿಯನ್ನು ಆಚರಿಸಲಾಯಿತು.

ಗುರುವಾರದಂದು ಬೆಳಗಾವಿಯ ಖಡೇ ಬಝಾರನಲ್ಲಿರುವ ಶಿವಸೇನೆ ಮಧ್ಯವರ್ತಿ ಕಾರ್ಯಾಲಯದಲ್ಲಿ ಜಿಲ್ಲಾ ಪ್ರಮುಖರಾದ ಹಣಮಂತರಾವ್ ಮಜುಕರ ಅವರ ನೇತೃತ್ವದಲ್ಲಿ ಹಿಂದೂ ಹೃದಯ ಸಮ್ರಾಟ ಬಾಳಾಸಾಹೇಬ್ ಠಾಕ್ರೆ ಅವರ ಜಯಂತಿಯನ್ನು ಆಚರಿಸಲಾಯಿತು.

ಮೊದಲಿಗೆ ಪರಶುರಾಮ್ ಗೋಂದಕರ ಅವರು ಛತ್ರಪತಿ ಶಿವಾಜೀ ಮಹಾರಾಜರ ಪ್ರತಿಮೆಗೆ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಜಿಲ್ಲಾ ಪ್ರಮುಖರಾದ ಹಣಮಂತರಾವ್ ಮಜುಕರ ಅವರು ಬಾಳಾಸಾಹೇಬ್ ಠಾಕ್ರೆ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಎಲ್ಲರಿಗೂ ಸಿಹಿ ಹಂಚಿ ಆನಂದ ವ್ಯಕ್ತಪಡಿಸಲಾಯಿತು.
ಈ ವೇಳೆ ಶಂಕರ ಗುರವ, ಮಂಜುನಾಥ ನಾಯಿಕರ, ಮನೋಹರ ಸುತಾರ್ , ಸಂತೋಷ ಜಯರಾಮ್, ಮಿನಾಕ್ಷಿ ಪಾಟೀಲ್, ಅಂಕಿತಾ ರಜಾಯಿ, ಅಮೋಲ್ ಮಜುಕರ, ಪ್ರಶಾಂತ ಖನ್ನುಕರ, ವಿನಾಯಕ ಕುಡೇಕರ, ಸೂರಜ್ ಬಾಳೇಕುಂದ್ರಿ, ಭಾರತಿ ರಾಕ್ಷೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!