Banglore

ಕರ್ನಾಟಕದಲ್ಲಿ ಎಚ್.ಎಂ.ಪಿ.ವಿ ವೈರಸ್ ಪತ್ತೆ…!!

Share

ಎಚ್.ಎಂ.ಪಿ.ವಿ ವೈರಸ್ ಹೊಸದೆನಲ್ಲ. ಜನರು ಭಯಪಡುವ ಅವಶ್ಯಕತೆಯಿಲ್ಲ. ಕರ್ನಾಟಕದಲ್ಲಿ ಪತ್ತೆಯಾದ ಪ್ರಕರಣಕ್ಕೂ ಚೀನಾಗೂ ಯಾವುದೇ ಸಂಬಂಧವಿಲ್ಲ. ಆದರೂ ಮುಂಜಾಗೃತೆ ವಹಿಸುವುದು ಅವಶ್ಯಕವಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಚ್.ಎಂ.ಪಿ.ವಿ ವೈರಸ್ ಹೊಸದೆನಲ್ಲ. ಇದರಿಂದ ನೆಗಡಿ, ಜ್ವರ, ಉಸಿರಾಟದ ತೊಂದರೆಯಾಗುತ್ತದೆ. ಚೀನಾದಲ್ಲಿ ಹೊಸ ವೈರಸ್ ಇರಬಹುದು. ಇದರ ಕುರಿತು ಭಾರತ ಸರ್ಕಾರದಿಂದ ಹೆಚ್ಚಿನ ಮಾಹಿತಿ ಬಂದಿಲ್ಲ. ಕರ್ನಾಟಕದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿರುವುದು ಪ್ರಥಮಬಾರಿ ಎಂದು ಹೇಳುವುದಕ್ಕಾಗಲ್ಲ. ಚಳಿಗಾಲದಲ್ಲಿ ಹೆಚ್ಚಾಗಿ ಈ ವೈರಸ್ ಕಾಣಿಸಿಕೊಳ್ಳುತ್ತದೆ. ಆದರೂ ಮುನ್ನೆಚರಿಕೆ ಕ್ರಮ ಕೈಗೊಳ್ಳಲಾಗುವುದು. ನೆಗಡಿ, ಜ್ವರ ಬಂದರೂ ಸ್ವಲ್ಪ ದಿನದ ಬಳಿಕ ಹೊರಟು ಹೋಗುತ್ತದೆ. ಇದಕ್ಕೂ ಚೀನಾಗೆ ಸಂಬಂಧವಿದೆ ಎಂದು ಹೇಳಲಾಗಲ್ಲ. ಗಾಬರಿ ಪಡುವ ಮತ್ತು ಜನರಲ್ಲಿ ಭಯವನ್ನು ಸೃಷ್ಠಿಸುವ ಅವಶ್ಯಕತೆಯಿಲ್ಲ. ಇಂದು ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಈಗ ಶಂಕಿತ ವೈರಸ್ ಪೀಡಿತ ಮಗು ಆರೋಗ್ಯವಾಗಿದೆ. ಪರಿಸ್ಥಿತಿ ಗಂಭೀರವಾಗಿಲ್ಲ. ಕೇಂದ್ರ ಸರ್ಕಾರ ಮತ್ತು ಐಸಿಎಂಆರ್ ಪರಿಗಣಿಸಲಿದೆ. ಆದರೂ ಮುನ್ನೆಚರಿಕೆ ವಹಿಸುವುದು ಒಳ್ಳೆಯದು. ಆತಂಕ ಪಡುವ ಅವಶ್ಯಕತೆಯಿಲ್ಲ. ಮಕ್ಕಳು ಮತ್ತು ಇಮ್ಯುನಿಟಿ ಪವರ್ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತದೆ. ಇದರ ತೀವ್ರತೆ ಹೆಚ್ಚಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಸದ್ಯಕ್ಕೆ ಜಾರಿಯಿಲ್ಲ ಎಂದರು.

Tags:

error: Content is protected !!