Belagavi

ಡಿ.ಕೆ.ಶಿ ಪರ ಬ್ಯಾಟ್ ಬೀಸಿದ ಎಚ್. ವಿಶ್ವನಾಥ್…

Share

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಬ್ಯಾಟ ಬೀಸಿರುವ ವಿಧಾನ ಪರಿಷತ್ ಸದಸ್ಯ ಎಚ್‌. ವಿಶ್ವನಾಥ್ ಅವರು 30 ತಿಂಗಳ ನಂತರ ಸಿಎಂ ಸ್ಥಾನದಿಂದ ಇಳಿಯಬೇಕು. ಹೀಗಾಗಿ ಸಿದ್ದರಾಮಯ್ಯ ಏನೇನೋ ಆಟಗಳನ್ನು ಆಡುತ್ತಿದ್ದಾರೆ. ಯಾರೂ ಏನೇ ಮಾಡಿದರೂ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ತಪ್ಪಿಸಲು ಆಗಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಔತಣಕೂಟಗಳನ್ನು ಏರ್ಪಾಡು ಮಾಡಿಸುತ್ತಿರುವುದೇ ಸಿಎಂ ಸಿದ್ದರಾಮಯ್ಯ. 30 ತಿಂಗಳ ನಂತರ ಸಿಎಂ ಸ್ಥಾನದಿಂದ ಇಳಿಯಬೇಕು. ಹೀಗಾಗಿ ಸಿದ್ದರಾಮಯ್ಯ ಏನೇನೋ ಆಟಗಳನ್ನು ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಯಾರೂ ಏನೇ ಮಾಡಿದರೂ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ತಪ್ಪಿಸಲು ಆಗಲ್ಲ. 40 ವರ್ಷಗಳಿಂದ ಡಿಕೆ ಶಿವಕುಮಾರ್ ಕಾಂಗ್ರೇಸ್ಸಿನಲ್ಲಿದ್ದಾರೆ. ಡಿಕೆ ಶಿವಕುಮಾರ್ ಎಲ್ಲಿಗೆ ಹೋದರೂ ಕಾರ್ಯಕರ್ತರು ಅವರನ್ನು ಗುರುತಿಸುತ್ತಾರೆ ಎಂದು ಲೇವಡಿ ಮಾಡಿದರು.

ಒಬ್ಬ ಮುಖ್ಯಮಂತ್ರಿಗಳಾಗಿ ಮುಡಾ ವಿಷಯದಲ್ಲಿ ಈ ರೀತಿ ಮರ್ಯಾದೆ ಕಳೆದುಕೊಳ್ಳಬಾರದಿತ್ತು. ಬಡವರ ನಿವೇಶನಗಳನ್ನು ಮನೆಯವರಿಗೆ ಮತ್ತು ಆಪ್ತರಿಗೆ ಬರೆದುಕೊಂಡಿದ್ದಾರೆ. ಸಿದ್ಧರಾಮಯ್ಯನವರ ಕಾಲದಲ್ಲಿ ಮೈಸೂರು ವಿಜಯನಗರದಂತಾಗಿದೆ. ಕಡಿಮೆ ದರಕ್ಕೆ ಸೈಟ್ ಖರೀದಿ ಮಾಡಿದ್ದಾರೆ. ಸಿದ್ಧರಾಮಯ್ಯನವರಿಗೆ ನಾಚಿಕೆಯಾಗಬೇಕು ಎಂದರು.

ಇನ್ನು ಕಾಂಗ್ರೆಸನ್ನು ಕಟ್ಟಡ ಸಿಎಂ ಸಿದ್ಧರಾಮಯ್ಯ, ಅನಾವಶ್ಯಕವಾಗಿ ಕಾಂಗ್ರೆಸ್ ಪಕ್ಷದ ನೇಮ್ & ಫೇಮ್ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Tags:

error: Content is protected !!