Belagavi

ಜಿಎ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳ ಸಮ್ಮಿಲನ

Share

ಬೆಳಗಾವಿಯ ಪ್ರಸಿದ್ಧ ಜಿಎ ಪ್ರೌಢಶಾಲೆಯ 1975 ನೇ ಬ್ಯಾಚ್ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಇಂದು ನಡೆಯಿತು.

ಹೌದು ಅಲ್ಲಿ ಆತ್ಮೀಯತೆಯ ಕಲರವ ಇತ್ತು 1975 ಅಂದರೆ ಸರಿಯಾಗಿ 50 ವರ್ಷಗಳ ಹಿಂದಿನ ಜಿಎ ಹೈಸ್ಕೂಲ್ ಹಳೆ ವಿದ್ಯಾರ್ಥಿಗಳು ಇಂದು ಸೇರಿ ಪರಸ್ಪರ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಳೆಯ ವಿದ್ಯಾರ್ಥಿ ಸಮೀರ್ ವಾಗ್ಮೊಡಿ , 50 ವರ್ಷಗಳ ನಂತರ ನಾವೆಲ್ಲ ಸೇರುತ್ತಿರುವುದು ಅತ್ಯಂತ ಸಂತಸದ ವಿಷಯ ಇಲ್ಲಿಯವರೆಗೆ ಯಾರು ಯಾರನ್ನು ಭೇಟಿಯಾಗಿರಲಿಲ್ಲ ತಮ್ಮೆಲ್ಲರನ್ನು ಸೇರಿಸುವ ಕಾರ್ಯ ಮಾಡಿದ ಗೆಳೆಯರಿಗೆ ಅಭಿನಂದನೆಗಳು. ನಮಗೆ ಶಿಕ್ಷಣ ನೀಡಿದ್ದ ಬಹಳಷ್ಟು ಶಿಕ್ಷಕರು ದೈವಾಧೀನರಾಗಿದ್ದು ಈಗ ಕೇವಲ ಇಬ್ಬರೇ ಶಿಕ್ಷಕರು ನಮ್ಮೊಂದಿಗೆ ಇದ್ದು ಆ ಗುರುಗಳ ಆಶೀರ್ವಾದವನ್ನು ಪಡೆಯುವ ಸೌಭಾಗ್ಯ ನಮಗೆ ಮತ್ತೊಮ್ಮೆ ದೊರೆತಿದೆ. ಮುಂಬೈ ಬೆಂಗಳೂರು ಸೇರಿದಂತೆ ಹಲವಾರು ಕಡೆಗಳಿಂದ ಸಹಪಾಠಿಗಳು ಬಂದಿದ್ದಾರೆ ಎಂದು ಹೇಳಿದರು….

ಈ ಸಂದರ್ಭದಲ್ಲಿ ಮತ್ತೋರ್ವ ಹಳೆಯ ವಿದ್ಯಾರ್ಥಿನಿ ಡಾ. ರಾಜೇಶ್ವರಿ ಮಹಾಂತಶೆಟ್ಟಿ ಅವರು ಮಾತನಾಡಿ, ಹೈಸ್ಕೂಲ್ನಲ್ಲಿ ಕೂಡಿ ಕಲಿತಿದ್ದ ಗೆಳೆಯ ಗೆಳತಿಯರು 50 ವರ್ಷಗಳ ನಂತರ ಸಿಗುತ್ತಾರೆಂದು ಕನಸು ಮನಸ್ಸಿನಲ್ಲಿಯೂ ನೆನೆಸಿರಲಿಲ್ಲ ಆದರೆ ಇಂದು ಆ ಕನಸು ನನಸಾಗಿದೆ ಮತ್ತೊಮ್ಮೆ ಎಲ್ಲರೂ ಸೇರಿದ್ದೇವೆ. ಮತ್ತೊಮ್ಮೆ ಗುರುಗಳನ್ನು ನೋಡುವ ಆಶೀರ್ವಾದ ಪಡೆಯುವ ಭಾಗ್ಯ ದೊರೆತಿದ್ದು ನಮಗೆಲ್ಲ ತುಂಬಾ ಖುಷಿಯಾಗಿದೆ ಎಂದು ಹೇಳಿದರು…

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ಉದ್ಘಾಟಿಸಿದ ನಿವೃತ್ತ ಪ್ರಾಚಾರ್ಯ ಬಿ. ಎಸ್. ಗವಿಮಠ ಸೇರಿದಂತೆ ಇತರ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು

Tags:

error: Content is protected !!