Accident

ಕಾಲ್ತುಳಿತದಲ್ಲಿ ಮೃತಪಟ್ಟ ತಾಯಿ-ಮಗಳ ಅಂತ್ಯಕ್ರಿಯೆ…

Share

ಕಾಲ್ತುಳಿತದಲ್ಲಿ ಮೃತಪಟ್ಟ ತಾಯಿ-ಮಗಳ ಅಂತ್ಯಕ್ರಿಯೆ…

ರಾತ್ರಿ ಜಿಲ್ಲಾಡಳಿತದಿಂದ ಪಾರ್ಥಿವಕ್ಕೆ ಗೌರವ

ಮನೆ ಮಾಲೀಕರ ಅಂತಿಮ ದರ್ಶನ ಪಡೆದ ಸಾಕುಶ್ವಾನ…

ಪ್ರಯಾಗರಾಜನ ಕುಂಭಮೇಳದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬೆಳಗಾವಿಯ ತಾಯಿ ಮಗಳ ಶವಗಳು ಎರಡನೇ ಹಂತದಲ್ಲಿ ಬೆಳಗಾವಿಗೆ ಆಗಮಿಸಿದವು. ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತವು ಮೃತರ ಪಾರ್ಥಿವಕ್ಕೆ ಅಂತಿಮ ನಮನ ಸಲ್ಲಿಸಿತು.

ಪ್ರಯಾಗರಾಜನ ಕುಂಭಮೇಳದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬೆಳಗಾವಿಯ ತಾಯಿ ಮಗಳ ಶವಗಳು ಎರಡನೇ ಹಂತದಲ್ಲಿ ಗೋವಾದಿಂದ ಬೆಳಗಾವಿಗೆ ಬೆಳಗಾವಿಯ ಜಿಲ್ಲಾಡಳಿತದ ಅಧಿಕಾರಿಗಳು ತೆಗೆದುಕೊಂಡು ಬಂದರು . ವಡಗಾಂವನ ಜ್ಯೋತಿ ಹತ್ತರವಾಠ ಮತ್ತು ಮೇಘಾ ಹತ್ತರವಾಠ ಅವರ ಪಾರ್ಥಿವಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಾಂತ ನಾಯಿಕ, ಜಿಲ್ಲಾಧಿಕಾರಿಗಳಾದ ಮೊಹಮ್ಮದ್‌ ರೋಷನ್, ಗ್ರೇಡ್ 2 ತಹಶೀಲ್ದಾರರಾದ ಅಸೋದೆ ಇನ್ನುಳಿದವರು ಪುಷ್ಪಹಾರವನ್ನು ಅರ್ಪಿಸಿ ಗೌರವ ಸಲ್ಲಿಸಿದರು. ನಂತರ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಜ್ಯೋತಿ ಹತ್ತರವಾಠ, ಪುತ್ರಿ ಮೇಘಾ ಮೃತದೇಹಗಳನ್ನು ರವಾನಿಸಲಾಯಿತು. ರಾತ್ರಿಯಾದ ಹಿನ್ನೆಲೆ ಬೆಳಗ್ಗೆ ಏಳು ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. .ನಂತರ ಶುಕ್ರವಾರ ಬೆಳಿಗ್ಗೆ ತಾಯಿ ಮತ್ತು ಮಗಳ ಪಾರ್ಥಿವ ವಡಗಾಂವಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಯ ವಿಧಿಯ ವೇಳೆ ಮನೆಗೆ ಪಾರ್ಥಿವಗಳು ಬರುತ್ತಿದ್ದಂತೆ ಅವರ ಸಾಕು ಶ್ವಾನ ಮನೆ ಮಾಲೀಕರ ಶವದ ನಡುವೆ ಕೆಲಕಾಲ ಕುಳಿತು ಅಂತಿಮ ದರ್ಶನ ತೆಗೆದುಕೊಂಡಿದ್ದು, ಕರುಳು ಹಿಂಡುವತಂತ್ತಿತ್ತು.

ನಂತರ ವಿಧಿವಿಧಾನಗಳಂತೆ ತೀವ್ರ ಶೋಕಾಕುಲ ವಾತಾವರಣದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು.ಶಹಾಪುರದ ಸ್ಮಶಾನಭೂಮಿಯಲ್ಲಿ

Tags:

error: Content is protected !!