ನೈರುತ್ಯ ರೇಲ್ವೆ ವಿಭಾಗ ವಿಭಾಗೀಯ ಕಚೇರಿ ಹುಬ್ಬಳ್ಳಿಯ ಖಾನಾಪೂರ ರೇಲ್ವೆ ಸ್ಟೇಷನ್ ಸುಧಾರಣಾ ಸಮಿತಿಗೆ ಖಾನಾಪೂರ ಶಾಸಕ ವಿಠ್ಠಲ ಹಲಗೇಕರ ಅವರ ಶಿಫಾರಸ್ಸಿನ ಮೇರೆಗೆ ಖಾನಾಪೂರ ಬಿಜೆಪಿಯ ರಾಜೇಂದ್ರ ಗಂಗಾರಾಮ ರಾಯಕಾ, ಪ್ರಕಾಶ್ ಗಣಪತಿ ನೀಲಜಕರ್, ಸುನೀಲ್ ರಾಯಪ್ಪ ಮಾಸೇಕರ , ಸುನೀಲ್ ದೇವರಾಜ್ ನಾಯಿಕ ಅವರನ್ನು ಖಾನಾಪೂರ ರೇಲ್ವೆ ಸ್ಟೇಷನ್ ಸುಧಾರಣಾ ಸಮಿತಿಗೆ ಎರಡು ವರ್ಷಗಳ ಕಾಲಾವಧಿಗೆ ನಾಮನಿರ್ದೇಶನ ಸದಸ್ಯರೆಂದು ನೇಮಕ ಮಾಡಿ ಆದೇಶ ಹೊರಡಿಸಿದೆ ಈ ಆದೇಶದ ಮೇರೆಗೆ ಖಾನಾಪೂರ ರೇಲ್ವೆ ಸ್ಟೇಷನ್ ಆಫೀಸಿನಲ್ಲಿ ಅವರನ್ನು ಸ್ವಾಗತಿಸಿದರು

ಈ ಸಂದರ್ಭದಲ್ಲಿ ಚಿಫ್ ಕಮರ್ಷಿಯಲ್ ಇನ್ಸ್ಪೆಕ್ಟರ್ ಭೀಮಪ್ಪ ಮೇದಾರ, ಸ್ಟೇಷನ್ ಸೂಪರಿಂಟೆಂಡೆಂಟ್ ರಾಜೀವ್ ಕುಮಾರ್ ಅವರು ನಾಮನಿರ್ದೇಶನ ಆದೇಶ ಪತ್ರ ನೀಡಿ ಗೌರವಿಸಲಾಯಿತು.ಈ ನಾಮನಿರ್ದೇಶನಕ್ಕಾಗಿ ಶಾಸಕ ವಿಠ್ಠಲ ಹಲಗೇಕರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಮೋದ್ ಕಚೋರಿ ಸೇರಿದಂತೆ ಇನ್ನಿತರರು ಪ್ರಯತ್ನಿಸಿದರು.