ನಾನು ಸದಾಕಾಲ ಮಾಜಿ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ, ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಲಾಯಕ್ ಇಲ್ಲಾ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯೆಂದ್ರ, ಜಾರಕಿಹೊಳಿ ನಡುವೆ ವಾಕ್ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿ ವಿಜಯೇಂದ್ರಗೆ ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು.

ಇವನಿಂದಲೇ ಸುನೀಲಕುಮಾರ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಅಂತಾ ಇದೆ, ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು. ನಾವು ಉತ್ತರ ಕರ್ನಾಟಕದ ಜನ ಹಿಂಗೇ ಇದ್ದೇವಿ, ಸತೀಶ್ ಜಾರಕಿಹೊಳಿ ಹೇಳಿದ್ದಾಗ ಕೂಡ ನಾನು ಒಬ್ಬನೇ ಹೋಗುತ್ತೇನೆ ಎಂದಿದ್ದಾ, ನಾವು ಯಾರಿಗೂ ಹೆದರಲ್ಲ, ಜಾರಕಿಹೊಳಿ ಪರವಾಗಿ ನಾವಿದ್ದೇವೆ, ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡ್ಡಿಯೂರಪ್ಪ ಜೇಲಿಗೆ ಹೋದ, ಯಡಿಯೂರಪ್ಪಗೆ ಹೊರಗಡೆ ಪೂಜ್ಯ ತಂದೆ ಅಂತಾನೇ, ಮನೆಯಲ್ಲಿ ಮುದಿಯಾ ಅಂತಾ ಕರಿತಾನೆ ಎಂದು ವಾಗ್ದಾಳಿ ನಡೆಸಿದರು.
ಅವನಿಂದಲೇ ಯಡ್ಡಿಯೂರಪ್ಪ ಹಾಳಾಗಿದ್ದು, ಯಡ್ಡಿಯೂರಪ್ಪ ಮಗನ ವ್ಯಾಮೋಹ ಬಿಡಲಿ, ಯಡ್ಡಿಯೂರಪ್ಪ ಗೆ ಮನೆಯಲ್ಲಿ ಕಿಮ್ಮತ್ತಿಲ್ಲಾ, ಯಡ್ಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲಾ, ಬಿ ಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಯಡಿಯೂರಪ್ಪ ಅನ್ಯಾಯ ಮಾಡಿದ್ದಾನೆ ಎಂದು ಮತ್ತೊಮ್ಮೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಯಡ್ಡಿಯೂರಪ್ಪ ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನ ಮಣ್ಣಲ್ಲಿಟ್ರೂ, ಯಡ್ಡಿಯೂರಪ್ಪ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.