ಪಟ್ಟಣದ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಿದ್ದ ರೈತ ಮಹಿಳೆ ಮೇಲೆ ಪುರಸಭೆ ಸಿಬ್ಬಂದಿ ಹಲ್ಲೆಗೈದಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಸವನಾಳ ಗಡ್ಡೆಯ ರೈತ ಮಹಿಳೆ ಸುಗಂಧಾ ವಗ್ಗೆ ಹಲ್ಲೆಗೀಡಾದವರು. ಮಾರಾಟ ನಡೆಸುತ್ತಿದ್ದ ಈ ವೇಳೆ ಆಗಮಿಸಿದ ಪುರಸಭೆ ಸಿಬ್ಬಂದಿ ಟಿಪ್ಪು ಬಾಗವಾನ 50 ರೂ. ತೆರಿಗೆ ಪಾವತಿಸುವಂತೆ ಕೇಳಿದ್ದಾರೆ. ಇನ್ನೂ ವ್ಯಾಪಾರವಾಗಿರದ ಕಾರಣ ನಂತರ ಕೊಡುವುದಾಗಿ ಹೇಳಿದ್ದಕ್ಕೆ ತಾವು ತಂದಿದ್ದ ತರಕಾರಿ ಬುಟ್ಟಿ ಎತ್ತಿ ಎಸೆದು, ತರಕಾರಿಯನ್ನು ನೆಲಕ್ಕೆ ಚೆಲ್ಲಾಡಿದ್ದಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಸುಗಂಧಾ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುಗಂಧಾ ವಗ್ಗೆ,ಹಲ್ಲೆಗೆಗೊಳಗಾದ ರೈತ ಮಹಿಳೆ