ಹುಬ್ಬಳ್ಳಿ ನವನಗರದಲ್ಲಿ ರಾಷ್ಟ್ರೀಕೃತ ಬ್ಯಾಂಕ ದರೋಡೆಗೆ ವಿಫಲ ಯತ್ನ… ದೂರು ನೀಡದೇ ಬ್ಯಾಂಕ್ ಮ್ಯಾನೇಜರ್ ನಿರ್ಲಕ್ಷ್ಯ, ಕಟ್ಟಾಗಿದ್ದ ಸೆಟ್ಟರ್ಸ ಲಾಕ್‌ಗೆ ವೆಲ್ಡಿಂಗ್ ಮಾಡಿಸಿ ರೀ ಫೀಟ್…

ಬೀದರ್ ಮಂಗಳೂರ ಹಾಗೂ ಮೈಸೂರು ಬಳಿಕ ಈಗ ದರೋಡೆಕೋರರ ಕಣ್ಣು ಹುಬ್ಬಳ್ಳಿಯ ನವನಗರ ರಾಷ್ಟ್ರೀಕೃತ ಬ್ಯಾಂಕ್ ಮೇಲೆ ಬಿತ್ತಾ ಎಂಬ ಅನುಮಾನ ಈಗ ಸೃಷ್ಟ್ರಿಯಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹುಬ್ಬಳ್ಳಿಯ ನವನಗರದ ಎಪಿಎಂಸಿ ಬಳಿಯ ರಾಷ್ಟ್ರೀಕೃತ ಕೆನರಾ ಬ್ಯಾಂಕನಲ್ಲಿ ದರೋಡೆಗೆ ವಿಫಲಯತ್ನ ನಡೆದಿದೆ.
ನವನಗರದ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿರೋ ಕೆನರಾ ಬ್ಯಾಂಕನ ಮುಖ್ಯ ಬಾಗಿಲು ಅಂದರೆ ಶೆಟರ್ಸ್ ಲಾಕ್ ಮುರಿದು, ಕೀ ಕಟ್ ಮಾಡಿದ ದುಷ್ಕರ್ಮಿಗಳು ಬ್ಯಾಂಕ ದರೋಡೆಗೆ ವಿಫಲಯತ್ನ ಮಾಡಿದ್ದಾರೆ. ಇನ್ನೂ ಇದರ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಯಾವುದೆ ದೂರು ನೀಡದೇ, ಘಟನೆಯ ಬಗ್ಗೆ ಸ್ಪಷ್ಟನೆ ನೀಡಲು ಹಿಂದೇಟು ಹಾಕು ಮೂಲಕ ನಿರ್ಲಕ್ಷ್ಯ ತೋರಿದ್ದು, ದರೋಡೆಕೋರ ವಿಫಲಯತ್ನ ನಡೆದ ಮುರಿದ ಬಾಗಿಲು, ಗೇಟ್ ಮತ್ತು ಕೀ ಗೆ ವೆಲ್ಡಿಂಗ್ ಮಾಡಿಸಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ದ ಬ್ಯಾಂಕ ಮ್ಯಾನೇಜರ್ ಬ್ರಹ್ಮಾನಂದ ಏನೂ ನಡದೆ ಇಲ್ಲ ಎಂಬಂತೆ ಸ್ಪಷ್ಟನೆ ನೀಡು ನಿರಾಕರಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ನಡೆ ನೋಡಿದ್ದರೆ ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಸದ್ಯ ಮಾಧ್ಯಮಗಳ ವರದಿ ಹಿನ್ನಲೆಯಲ್ಲಿ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಕೈಗೊಂಡಿದ್ದಾರೆ.