ಮಾಜಿ ಡಿಸಿಎಂ ಈಶ್ವರಪ್ಪ ಕ್ರಾಂತಿವೀರ ಹೆಸ್ರಲ್ಲಿ ಮತ್ತೊಂದು ಬ್ರಿಗೇಡ್ ಲಾಂಚ್ ಮಾಡಲು ತಯಾರಿ ನಡೆಸಿದ್ದಾರೆ. ಇದೆ ಫೆಬ್ರವರಿ 4ರಂದು ಕ್ರಾಂತಿವೀರ ಬ್ರಿಗೇಡ್ ಅಸ್ತಿತ್ವಕ್ಕೆ ಬರಲಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ.

ಈ ಹಿನ್ನಲೆ ಈಶ್ವರಪ್ಪ ಜಿಲ್ಲೆಯಾದ್ಯಂತ ಪೂರ್ವಭಾವಿ ಸಭೆಗಳನ್ನ ನಡೆಸುತ್ತಿದ್ದಾರೆ. ನಿನ್ನೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಸ್ವಾಮೀಜಿಗಳು, ಹಾಲುಮತ ಮುಖಂಡರ ಜೊತೆಯೆ ಯತ್ನಾಳ್ ಸಭೆ ನಡೆಸಿದ್ದಾರೆ. ಕ್ರಾಂತಿವೀರ ಬ್ರಿಗೇಡ್ ಹಿಂದೂತ್ವದ ಉಳುವಿಗಾಗಿಯೂ ಶ್ರಮಿಸಲಿದೆ ಎಂದಿದ್ದಾರೆ..