ಖಾನಾಪೂರ ಪಟ್ಟಣ ಪಂಚಾಯಿತಿ ಅಧ್ಯಕ್ಷ,ಉಪಾಧ್ಯಕ್ಷರ ಸ್ಥಾನಕ್ಕೆ ಜನವರಿ 27 ರಂದು ಸೋಮವಾರ ರಂದು ಮಧ್ಯಾಹ್ನ 3 ಗಂಟೆಗೆ ಚುನಾವಣೆ ನಡೆಯಲಿದ್ದು ಈ ಪ್ರಕ್ರಿಯೇ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಈ ಚುನಾವಣೆಗೆ ಸಂಬಂಧಿಸಿದಂತೆ ಖಾನಾಪೂರ ಪಟ್ಟಣ ಪಂಚಾಯಿತಿಯ 20 ಸದಸ್ಯರಿಗೆ ನೋಟಿಸ್ ನೀಡಲಾಗಿದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಅರ್ಜಿಗಳನ್ನು ಜನವರಿ 27 ರಂದು ಸೋಮವಾರ ಬೆಳಗ್ಗೆ 11 ಘಂಟೆಯಿಂದ ಮಧ್ಯಾಹ್ನದ 1 ಘಂಟೆಯವರೆಗೆ ಸಲ್ಲಿಸುವ ಅವಕಾಶ ಇದ್ದು, ಅರ್ಜಿ ಪರಿಶೀಲನೆಯ ನಂತರ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಕಾರ್ಯ ನಿರ್ವಹಿಸಲಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳನ್ನು ಎರಡು ವರ್ಷಗಳ ಅವಧಿಗೆ ಸಾಮಾನ್ಯ ಮಹಿಳೆಯರಿಗೆ ಮೀಸಲಿಡಲಾಗಿದೆ.ಎರಡೂ ಹುದ್ದೆಗಳು ಸಾಮಾನ್ಯ ಮಹಿಳೆಯರಿಗಾಗಿ ಆಗಿದ್ದರಿಂದ ನಗರ ಸೇವಕ ಲಕ್ಷ್ಮಣ್ ಮಾದಾರ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು ಆದರೆ ತಡೆಯಾಜ್ಞೆ ಇದ್ದ ಸ್ಥಿತಿಯಲ್ಲಿಯೇ ಎಂದು ಬಂದ ಹಿನ್ನೆಲೆಯಲ್ಲಿ ಮತ್ತೆ ಚುನಾವಣೆ ನಡೆಯಲಿದ್ದು ಖಾನಾಪೂರ ಪಟ್ಟಣ ಪಂಚಾಯಿತಿ 20 ನಗರಸೇವಕರಲ್ಲಿ 9 ಜನ ಮಹಿಳಾ ನಗರಸೇವಕಿಯರು ಇದ್ದಾರೆ.ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೂರರಿಂದ ನಾಲ್ಕು ನಗರಸೇವಕಿಯರು ಪೈಪೋಟಿ ನಡೆಸುತ್ತಿದ್ದಾರೆ ಆದ್ದರಿಂದ ಈ ಚುನಾವಣೆಯು ತುಂಬಾ ಜಿದ್ದಾಜಿದ್ದಿನಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಈ ಚುನಾವಣೆಯಲ್ಲಿ ಮತದಾನಕ್ಕೆ 20 ನಗರಸೇವಕರು ಸೇರಿದಂತೆ ಶಾಸಕರ ಮತ್ತು ಸಂಸಂದ ಹಾಗೂ ವಿಧಾನ ಪರಿಷತ್ ಸದಸ್ಯ ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ.ಒಟ್ಟಿನಲ್ಲಿ ಬಹಳ ದಿನಗಳ ಕಾಲ ಕಾನೂನು ಸಮರದಲ್ಲಿ ಇದ್ದ ಈ ಚುನಾವಣೆ ಸುಖವಾಗಿ ನಡೆಯುತ್ತದೆಯೋ ಅಥವಾ ಮತ್ತೆ ನ್ಯಾಯಾಲಯದ ಕಟ್ಟೆ ಇರುತ್ತದೆಯೋ ಕಾದು ನೋಡಬೇಕಿದೆ.