ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನೀಡಿ ಬೆಳಗಾವಿಗರಿಗೆ ಅನ್ಯಾಯ ಮಾಡದಂತೆ ಬಸವ ಕಾಯಕ ಜೀವಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಬಸವ ಕಾಯಕ ಜೀವಿಗಳ ಸಂಘದ ಪದಾಧಿಕಾರಿಗಳು ಹಿಡಕಲ್ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನೀಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಹಿಡಕಲ್ ಜಲಾಶಯದ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನೀಡಿದರೇ ಬೆಳಗಾವಿಯ ಜನತೆಗೆ ನೀರಿನ ಸಮಸ್ಯೆ ಎದುರಾಗಲಿದೆ. ಸರ್ಕಾರದ ಈ ನಿರ್ಧಾರ ಬೆಳಗಾವಿಗರ ಮೇಲೆ ಅನ್ಯಾಯ ಮಾಡಿದಂತಾಗುತ್ತದೆ. ಹಿಡಕಲ್ ಜಲಾಶಯವನ್ನು ಬೆಳಗಾವಿ ನಗರಕ್ಕೆ ಅನುಕೂಲವಾಗಲೆಂದು ನಿರ್ಮಿಸಲಾಗಿದೆ. ಈಗಾಗಲೇ 15 ದಿನಕ್ಕೊಮ್ಮೆ ಕೆಲವೊಂದು ಕಡೆ ನೀರು ಸರಬರಾಜು ಮಾಡಲಾಗುತ್ತಿದೆ. ಬೆಳಗಾವಿಯ ಜನಪ್ರತಿನಿಧಿಗಳು ಈ ಕುರಿತು ಮೌನ ವಹಿಸಿರುವುದೇಕೆ ಎಂದು ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಮಹಾಂತೇಶ ಗುಡಸ ಪ್ರಶ್ನಿಸಿದರು. ಬೈಟ್
ಈ ಸಂದರ್ಭದಲ್ಲಿ ಅಶೋಕ ಬೆಂಡಿಗೇರಿ, ಜಗದೀಶ ಖಡಬಡಿ, ಸೂರ್ಯಕಾಂತ ಭಾಂವಿ, ಶರಣ ಪ್ರಸಾದ, ಶಿವಾನಂದ ವಾಘರವಾಡಿ, ಶರಣು ಲಿಂಗಾಯತ್, ಎಸ್.ಎಸ್. ಪಾಟೀಲ್, ಶಂಕರ ಗಡಗಲಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.