ಇಂದು ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೆ.ಎಲ್.ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರ ನಿವಾಸಕ್ಕೆ ಭೇಟಿ ನೀಡಿ ಭೋಜನ ಸವಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಪ್ರಭಾಕರ ಕೋರೆ ತಾವು ಕಾಂಗ್ರೆಸ ಪಕ್ಷವನ್ನು ಸೇರುತ್ತಿಲ್ಲ. ಈ ವಯಸ್ಸಿನಲ್ಲಿ ಎರಡನೇ ಮದುವೆ ನಮಗೇಕೆ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದು ತಮ್ಮ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗ ಮಾತನಾಡಿದ ಕೆ.ಎಲ್.ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಡಿ.ಕೆ.ಶಿವಕುಮಾರ್ ಅವರೊಂದಿಗೆ ಸುಮಾರು 40 ವರ್ಷದ ಹಳೆಯ ಸ್ನೇಹ. ವೈಯಕ್ತಿಕವಾಗಿ ಅವರು ಎಂದು ರಾಜಕೀಯ ಚರ್ಚೆ ತಮ್ಮೊಂದಿಗೆ ಮಾಡಿಲ್ಲ. ಸಂಕ್ರಾಂತಿ ಹಿನ್ನೆಲೆ ರೊಟ್ಟಿ ಊಟ ಮಾಡಲೂ ಇಂದು ನಮ್ಮೆಡೆ ಆಗಮಿಸಿದ್ದಾರೆ ಅಷ್ಟೇ ಎಂದರು. ಬೈಟ್
ಇನ್ನು ಕಾಂಗ್ರೆಸ ಪಕ್ಷ ಸೇರ್ಪಡೆಯಾಗಲಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ವಯಸ್ಸಿನಲ್ಲಿ ಎರಡನೇ ಮದುವೆ ಬೇಡವಾಗಿದೆ. ಬಿಜೆಪಿಯಲ್ಲಿ ನಾನು ಸಂತೃಪ್ತನಾಗಿದ್ದೇನೆ. ರಾಜಕೀಯ ನಿವೃತ್ತಿಯ ಬಳಿಕ ಸಮಾಜಸೇವೆಯಲ್ಲಿ ಸಕ್ರಿಯರಾಗಿದ್ದೇವೆ ಎಂದರು.
ಬೆಳಗಾವಿಯ ಎಲ್ಲ ಐತಿಹಾಸಿಕ ಕಾರ್ಯಕ್ರಮಗಳಿಗೆ ಕೆ.ಎಲ್.ಇ ಸಂಸ್ಥೆ ಪಕ್ಷಾತೀತವಾಗಿ ಸಹಯೋಗ ನೀಡುತ್ತದೆ. ನಮ್ಮ ಸಂಸ್ಥೆಯಲ್ಲಿಯೇ ಪಕ್ಷಾತೀತ ಜನರಿದ್ದಾರೆ ಎಂದ ಅವರು, ಗಾಂಧಿಜೀಯವರ ಮೇಲಿನ ಆದರಕ್ಕೆ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡುತ್ತೇನಷ್ಟೇ. ಗಾಂಧಿ ಸಮಾವೇಶದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಬಂಡಾಯದ ಕುರಿತು ಮಾತನಾಡಿದ ಅವರು ಪಕ್ಷದ ದೊಡ್ಡದಾದಂತೆ ಬಂಡಾಯ ಇರುವುದು ಸಹಜ ಎಂದರು. ವಿಜಯೇಂದ್ರ ರಾಜೀನಾಮೆ ಯಾಕೆ ಕೇಳುತ್ತಿದ್ದಾರೆ ಗೊತ್ತಿಲ್ಲ. ಅಧ್ಯಕ್ಷರು ಯಾರೇ ಆದರೂ ಪಕ್ಷ ಕಟ್ಟುವ ಕೆಲಸವನ್ನು ಮಾಡಬೇಕು. ತಮ್ಮಲ್ಲಿ ಏನೇ ಇದ್ದರೂ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು. ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಬಾರದು.ಯಡಿಯೂರಪ್ಪ ಕರ್ನಾಟಕದಲ್ಲಿ ಹಿರಿಯರು ಅವರಿಗೆ ಗೌರವ ನೀಡಿ ತಮ್ಮ ಮತಬೇಧವನ್ನು ಮುಗಿಸಕೊಳ್ಳುವುದು ಒಳ್ಳೆಯೆಂದು ಸಲಹೆಯನ್ನು ನೀಡಿದರು