ವಿಜಯಪುರದಲ್ಲಿ ಡೆಡ್ಲಿ ಮುಸುಕುಧಾರಿ ಗ್ಯಾಂಗ್ ಸದಸ್ಯನ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ ಪೊಲೀಸ್ ಅಧಿಕಾರಿಗೆ ಭೃಂಗಿಮಠ ಕ್ರೀಯಾತ್ಮಕ ವೇದಿಕೆ ಸನ್ಮಾನಿಸಿದೆ. ಕಳೆದ ಎರಡು ತಿಂಗಳಿನಿಂದ ವಿಜಯಪುರ ನಗರದ ಹೊರಭಾಗದ ಮನೆಗಳಲ್ಲಿ ದರೋಡೆ ಹಾಗೂ ಜನರ ಮೇಲೆ ಮಾರಣಾಂತಿಕ ಹಲ್ಲೆಗಳನ್ನ ಮಾಡುವ ಮೂಲಕ ಮುಸುಕುಧಾರಿ ಗ್ಯಾಂಗ್ ಹಾವಳಿ ಇಟ್ಟಿತ್ತು.
ಮೊನ್ನೆ ದರೋಡೆಗೆ ಬಂದ ವೇಳೆಯೆ ಗ್ಯಾಂಗ್ ಬೆನ್ನಟ್ಟಿದ್ದ ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ ಪೈರಿಂಗ್ ಮಾಡಿ ಗ್ಯಾಂಗ್ ಸದಸ್ಯನೊಬ್ಬಮ ಬಂಧನ ಮಾಡಿದ್ರು. ಈ ಮೂಲಕ ಸರಣಿ ದರೋಡೆಯಿಂದ ಕಂಗೆಟ್ಟಿದ್ದ ಜನರಲ್ಲಿ ಧೈರ್ಯ ಮೂಡಿಸಿದ ಸಿಪಿಐಗೆ ಸನ್ಮಾನಿಸುವ ಮೂಲಕ ಗೌರವಿಸಲಾಗಿದೆ..