15 ಶಾಸಕರು ದುಬೈ ಪ್ರವಾಸಕ್ಕೆ ಹೋಗಲಿದ್ದೇವೆ ಎಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು. ಆದರೇ ಇಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಸಕ ಆಸೀಫ್ ಸೇಠ್ ಸಹೋದರ ಮಾಜಿ ಶಾಸಕ ಫಿರೋಜ್ ಸೇಠ್ ಮನೆಗೆ ದಿಢೀರ್ ಭೇಟಿ ನೀಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆ ಶನಿವಾರ ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು 15 ಜನ ಶಾಸಕರು ದುಬೈ ಪ್ರವಾಸಕ್ಕೆ ಹೋಗಲಿದ್ದೇವೆಂದು ಬಹಿರಂಗ ಹೇಳಿಕೆಯನ್ನು ನೀಡಿದ್ದರು. ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಕಾಣಿಸಿಕೊಳ್ಳುವ ಆಸೀಫ್ ಸೇಠ್ ಅವರ ಸಹೋದರನ ನಿವಾಸಕ್ಕೆ ಇಂದು ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಿಢೀರ್ ಭೇಟಿ ನೀಡಿ, ಬೆಳಗಿನ ಉಪಹಾರವನ್ನು ಸೇವಿಸಿದ್ದು, ತೀವ್ರ ಕುತೂಹಲವನ್ನು ಮೂಡಿಸಿದೆ.
ಇನ್ನು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಜಿ ಶಾಸಕ ಫಿರೋಜ್ ಸೇಠ್ ಅವರು ತಂದೆಯ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ಧೇವೆ. ಜೀವ ಹೋದರೂ ಕಾಂಗ್ರೇಸ್ ಬಿಡಲ್ಲ. ಎಲ್ಲ ನಾಯಕರೊಂದಿಗೆ ತಮ್ಮ ಒಡನಾಡ ಚೆನ್ನಾಗಿದೆ. ಜಾರಕಿಹೊಳಿ ಕುಟುಂಬದೊಂದಿಗೂ ಕಳೆದ 50 ವರ್ಷಗಳ ಸಂಬಂಧವಿದೆ. ಇನ್ನು ಸಹೋದರ ಶಾಸಕ ಆಸೀಫ್ ಸೇಠ್ ಗೆಳೆಯರೊಂದಿಗೆ ದುಬೈಗೆ ಹಾಲಿಡೇ ಟ್ರಿಪಗೆ ಹೋಗುವುದಾಗಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಬೇಡಿ. ಹಾಲಿಡೇ ಟ್ರಿಪ್ಪಿಗೆ ಹೋದ್ರೇ ಪಕ್ಷಕ್ಕೆ ಡ್ಯಾಮೇಜ್ ಆಗುವ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ನಿರ್ಣಯವೇ ನಮ್ಮಲ್ಲಿ ಅಂತಿಮವಿರುತ್ತದೆ. ಇದರಲ್ಲಿ ಬೇರೆನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.