ಹುಬ್ಬಳ್ಳಿಯಲ್ಲಿ ವಾಹನ ಸವಾರರನ್ನು ತಡೆದು ದಂಡ ವಸೂಲಿ ಮಾಡುವ ಮೂಲಕ ಅಮಾನತುಗೊಂಡ ಪೊಲೀಸಪ್ಪನ ಹುಚ್ಚಾಟದ ವಿಡಿಯೋ ಇದೀಗ ವೈರಲ್ ಆಗಿದೆ. ಅಮಾನತುಗೊಂಡಿರುವ ಪೊಲೀಸಪ್ಪ ಕರ್ತವ್ಯದ ಸಮವಸ್ತ್ರವನ್ನು ಧರಿಸಿಕೊಂಡು ಸೋಮವಾರ ರಾತ್ರಿ ಇಲ್ಲಿನ ಚೆನ್ನಮ್ಮ ವೃತ್ತದ ಬಳಿಯಲ್ಲಿ ವಾಹನ ಸವಾರರನ್ನು ತಡೆದು ಬೇಕಾಬಿಟ್ಟಿಯಾಗಿ ವಸೂಲಿ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಆದರೆ ಪೊಲೀಸಪ್ಪ ಕುಡಿದು ವಾಹನ ಸವಾರರನ್ನು ತಡೆದು ಕಿರಿಕಿರಿ ಮಾಡುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ಅಮಾನತುಗೊಂಡಿರುವ ಪೊಲೀಸಪ್ಪನಿಗೆ ತರಾಟೆ ತಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ನೀನು ನಿಜವಾದ ಪೊಲೀಸ್ ಆದರೆ ಪೊಲೀಸರಿಗೆ ಮಾಹಿತಿ ನೀಡೋಣ ಎಂದ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಈ ಹಿಂದೆ ಕರ್ತವ್ಯದ ವೇಳೆಯಲ್ಲಿ ಕುಡಿದು ಹುಚ್ಚಾಟ ಮೆರದಿದ್ದ ಹಿನ್ನಲೆ ಅಮಾನತು ಮಾಡಲಾಗಿತ್ತು ಎಂಬುದು ಮೂಲಗಳಿಂದ ತಿಳಿದು ಬಂದಿದೆ.