ವಿಜಯಪುರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಿನ್ನೆ ನಡೆಯಿತು. ಸಭೆಯ ಪ್ರಾರಂಭದಲ್ಲೆ ವಾರ್ಡ ನಂ 35 ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ ಮೈಕ್ ಸರಿ ಇಲ್ಲದೇ ಇರೋದಕ್ಕೆ ಬಂದ್ ಇರೋ ಮೈಕ್ ಕೊಟ್ಟು ನಾಟಕ ಮಡುತ್ತಿದ್ದೀರಾ ಎಂದು ಗರಂ ಆದರು.
ಎರಡು ಮೂರು ಮೈಕ್ ಗಳನ್ನು ಚೇಂಚ್ ಮಾಡಿಕೊಟ್ಟರೂ ಯಾವೊಂದೂ ಮೈಕ್ ನಲ್ಲಿ ಸೌಂಡ ಬರದೇ ಇರೋದರಿಂದ ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಡೆಯಿತು. ಅಧಿಕಾರಿಗಳ ಮೈಕ್ ಕೂಡ ವರ್ಕ ಆಗ್ತಾ ಇರಲಿಲ್ಲ.
ಕೆಲವೊಂದು ವರ್ಕ ಆಗ್ತಾ ಇರಲಿಲ್ಲ. ವರ್ಕ ಆಗ್ತಿರೋ ಮೈಕ್ ಗಳಿಂದ ಸರಿಯಾಗಿ ಸೌಂಡ್ ಬರದೇ ಯಾವ ವಿಷಯದ ಬಗ್ಗೆ ಚರ್ಚೆ ಮಾಡ್ತಿದಾರೆ ಅನ್ನೋದೇ ಸದಸ್ಯರಿಗೆ ಹರಸಾಹಸ ಆಗಿತ್ತು.