ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೆಳಗಾವಿಯ ಸಂಘಟನೆಯಿಂದ ಸಂವಿಧಾನ ಬಚಾವೋ ಅಮಿತ್ ಶಾ ಹಠಾವೊ ಘೋಷವಾಕ್ಯದಡಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಬೆಳಗಾವಿಯಿಂದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಸಂವಿಧಾನ ಹಾಗೂ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕೇಂದ್ರ ಗ್ರಹ ಮಂತ್ರಿ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಲಾಯಿತು. ರಾಜ್ಯ ಸಂಚಾಲಕ ಸಿದ್ದಪ್ಪ ಕಾಂಬಳೆ, ಜಿಲ್ಲಾ ಸಂಚಾಲಕ ಮಹಾಂತೇಶ್ ತಳವಾರ್, ರಾಮಾ ಚವಾನ್, ಸಂತೊಷ ಕಾಂಭಳೆ, ದೀಪಕ್ ದಬಾಡಿ, ಅಶೋಕ್ ಕಾಂಬಳೆ, ಉಪಸ್ಥಿತ ರಿದ್ದರು