ಭಾರತದ ಮಹಾನ್ ಸುಪುತ್ರ, ಮಾಜಿ ಸಂಸದ ಬ್ಯಾರಿಸ್ಟರ್ ನಾಥ್ ಪೈ ಅವರ ಪುಣ್ಯಸ್ಮರಣೆ ದಿನದ ನಿಮಿತ್ತ ಶಹಾಪುರದ ಬ್ಯಾರಿಸ್ಟರ್ ನಾಥ್ ಪೈ ಚೌಕ್ ನಲ್ಲಿ ನೂತನ ಫಲಕವನ್ನು ಅನಾವರಣಗೊಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿನಯ್ ಯಾಳಗಿ ಮತ್ತು ರಮಾಕಾಂತ್ ಕೊಂಡುಸ್ಕರ್ ಅವರು ಬ್ಯಾರಿಸ್ಟರ್ ನಾಥ ಪೈ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ಶಹಾಪುರ ಮಾಜಿ ನಗರಸೇವಕ ನೇತಾಜಿ ಜಾಧವ್ ಅಧ್ಯಕ್ಷತೆ ವಹಿಸಿದ್ದರು, ಮಾಜಿ ಮಹಾಪೌರ ಮಾಲೋಜಿರಾವ್ ಅಷ್ಟೇಕರ ಅವರು ಈ ವೇಳೆ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಖಜಾಂಚಿ ಪ್ರಕಾಶ ಮರಗಾಳೆ, ಅಂಕುಶ ಕೇಸರಕರ, ಶುಭಂ ಶೇಳಕೆ ಇನ್ನುಳಿದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಾಜಿ ನಗರಸೇವಕ ನೇತಾಜಿ ಜಾಧವ್ ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಬ್ಯಾರಿಸ್ಟರ್ ನಾಥ್ ಪೈ ಅವರ ಬೆಳಗಾವಿಯ ಒಡನಾಟವನ್ನು ತಿಳಿಸಿದರು. ಇನ್ನು ಅದೇ ರೀತಿ ವಿನಯ್ ಆಳಗಿ ಅವರು ಗಡಿಭಾಗದೊಂದಿಗೆ ಬ್ಯಾರಿಸ್ಟರ್ ನಾಥ್ ಪೈ ಅವರ ಸಂಬಂಧದ ಬಗ್ಗೆ ಮಾಹಿತಿಯನ್ನು ನೀಡಿದರು.
ಪ್ರದೀಪ ಶಟಿತಬಾಚೆ, ಶಿವಾಜಿರಾವ್ ಹಾವಳನ್ನಾಚೆ, ಬಾಪು ಜಾಧವ, ಯಶವಂತ ದೇಸಾಯಿ, ದಶರತ್ ಶಿಂಧೆ, ರವಿ ಶೀಗೇಹಳಿಕರ್, ಹೀರಾಲಾಲ್ ಚವ್ಹಾಣ, ಸಾಮಜೀ, ಶಾಹು ಶಿಂಧೆ, ಯಲ್ಲಪ್ಪ ನಾಗೋಜಿ, ವಿಜಯ ಜಾಧವ, ದಿಲೀಪ್ ದಳವಿ, ಸಂಜಯ ಬೈಲೂರಕರ್, ವಿನಾಯಕ ಕಾಳವೆ, ಸೂರಜ್ ಕಡೋಲಕರ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.