ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರು ಸ್ವಾರ್ಥಕ್ಕಾಗಿ ಒಡೆದು ಆಳುವ ನೀತಿ ಅವಲಂಬಿಸುತ್ತಿದ್ದಾರೆ. ಆದರೇ ಆ ಕಾಲದಲ್ಲೇ ನಿಜಶರಣ ಅಂಬಿಗರ ಚೌಡಯ್ಯ ಬೇರೆ ಬೇರೆ ಜಾತಿಗಳೊಂದಿಗೆ ಭಿನ್ನಮತ ತರಬೇಡಿ ಒಂದಾಗಿ ಬಾಳಿ ಎಂದು ಸಂದೇಶವನ್ನು ನೀಡಿದ್ದರು. ಮಹಾತ್ಮರು ಸದಾ ಏಕತೆಯ ಸಂದೇಶವನ್ನು ನೀಡಿದ್ದಾರೆ. ಇದನ್ನರಿತು ಬಾಳಬೇಕೆಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಬುಧವಾರದಂದು ಕಾಗವಾಡ ಸರ್ಕಾರಿ ಕನ್ನಡ ಶಾಲೆಯ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ೯೦೫ ಜಯಂತಿಯನ್ನು ಆಚರಿಸಲಾಯಿತು. ಸಮಾರಂಭದ ಸಾನಿಧ್ಯ ವಹಿಸಿದ್ದ ಸಿಂದಗಿ ಮಠದ ಗಂಗಾಧರ ಸ್ವಾಮೀಜಿಗಳು ನಿಜ ಶರಣ ಅಂಬಿಗರ ಚೌಡಯ್ಯ ಆರ್ಶೀವಚನ ನೀಡಿ, ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕೆಂದು ಸಲಹೆಯನ್ನು ನೀಡಿದರು.
ಅಥಣಿಯ ಕಾಡಯ್ಯ ಮಠದ ಗಂಗಾಧರ್ ಹಿರೇಮಠ್ ಸ್ವಾಮೀಜಿಗಳು ೧೨ನೇ ಶತಮಾನದಲ್ಲಿ ಬಸವಣ್ಣನವರೊಂದಿಗೆ ಸಮಾಜದಲ್ಲಿಯೇ ಇರುವ ಬಿರುಕುಗಳನ್ನು ತೊಡೆದು ಹಾಕಿ ಒಂದಾಗಿ ಬಾಳಲು ಮತ್ತು ಅವರಲ್ಲಿರುವ ಭೇದಭಾವಗಳನ್ನು ದೂರಗೊಳಿಸುವಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಸೇವೆ ಅಪಾರವಾಗಿದೆ. ಜೀವನದಲ್ಲಿ ಪ್ರತಿಯೊಬ್ಬರು ನೇರವಾಗಿ ನುಡಿದಾಗ ಮಾತ್ರ ಸಮಾಜಕ್ಕೆ ಒಳಿತಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಕಾಗವಾಡ ಗ್ರೇಡ್-೨ ತಹಸಿಲ್ದಾರ ರಶ್ಮಿ ಜಕಾತೆ, ಶಂಕರ ವಾಘಮೋಡೆ, ಬಿಇಓ ಎಂ ಆರ್ ಮುಂಜೆ, ಸಿ ಡಿ ಪಿ ಓ ಸಂಜುಕುಮಾರ ಸದಲಗೆ, ಸತ್ಯ ಮೇಧಾವಿ, ಎಂ ಆರ್ ಪಾಟೀಲ, ಕೋಳಿ ಸಮಾಜದ ತಾಲೂಕ ಅಧ್ಯಕ್ಷ ಸುರೇಶ ಕೋಳಿ, ಉಗಾರ ಗ್ರಾಮದ ಅಧ್ಯಕ್ಷ ಭಗವಂತ ತಳವಾರ, ದುಂಡಪ್ಪ ಚಳೇಕರ್, ರಾಯಪ್ಪ ಕೋಳಿ, ಮಾರುತಿ ಸನದಿ, ಅಪ್ಪಾಸಾಹೇಬ್ ಸನದಿ, ಎಂ ಟಿ ತಳವಾರ್, ವೀರಭದ್ರ ಕಟಗೇರಿ, ನಿವೃತ್ತ ಅಧಿಕಾರಿ ಹೊಳಪುಗೋಳ, ಸೇರಿದಂತೆ ಕೋಳಿ ಸಮಾಜದ ಮುಖಂಡರು ಉಪಸ್ಥಿತರಿದ್ಧರು.