ಬಸ್ ದರ ಏರಿಕೆ ಜನ ವಿರೋಧಿ. ಶಕ್ತಿ ಯೋಜನೆಗೆ ಕಾಲಕಾಲಕ್ಕೆ ಹಣ ಕೊಟ್ಟಿಲ್ಲ.ಡಿಸೇಲ್ ಗೆ ಹಣವೂ ಇಲ್ಲ ಎಂದು ಮಾಜಿ ಸಿಎಂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿ ಅವರು ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಕಾಲಕಾಲಕ್ಕೆ ಹಣ ಕೊಟ್ಟಿಲ್ಲ. ಕಾಲಕಾಲಕ್ಕೆ ಹಣ ಕೊಟ್ಟಿಲ್ಲ. ನಾನು ಸಿಎಂ ಆದಾಗ 4500 ಜೊಸ ಬಸ್ ಗಳಿಗೆ ಆದೇಶ ಮಾಡಿದ್ದೇ,ಅದೇ ಬಸ್ ಇವಾಗ ಬರ್ತಿವೆ. ಕೋವಿಡ್ ಸಮಯದಲ್ಲಿ ಲಾಸ್ ಆದರೂ ಯಡಿಯೂರಪ್ಪ ಸರಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯ ದಿವಾಳಿಯಾಗಿದೆ. ಡಿಸೇಲ್ ಗೆ ಹಣವೂ ಇಲ್ಲ,ಹೀಗಾಗಿ ತೆರಿಗೆ ಹಾಕತೀದಾರೆ. ಎಲ್ಲದರವೂ ಹೆಚ್ಚಾಗಿದೆ,ಹಾಲು ನೀರು, ಎಲ್ಲವೂ ದರ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಳಿಗೆ ತೆರಗೆ ಹಾಕೋ ದಿನ ಬಹಳ ದಿನ ದೂರ ಇಲ್ಲ. ದುರಾಡಳಿತ,ಅಭಿವೃದ್ಧಿ ಶೂನ್ಯದ ಪ್ರತಿಫಲವೇ ದರ ಹೆಚ್ಚಳ ಎಂದರು. ರಸ್ತೆಗಳು ತಗ್ಗು ಬಿದ್ದಿವೆ,ಇವರಿಗೆ ಒಂದು ಪ್ಯಾಚ್ ವರ್ಕ್ ಮಾಡೋಕೆ ಆಗಿಲ್ಲ. ನಮ್ಮ ಸರ್ಕಾರದ 40 ಪರ್ಸೆಂಟ್ ಗೆ ಸಾಕ್ಷಿ ಕೊಡೋಕೆ ಆಗಿಲ್ಲ.ಸರ್ಕಾರದಲ್ಲಿ ಬ್ರಷ್ಟಾಚಾರ ಹೆಚ್ಚಾಗಿದ್ದಂತೂ ನಿಜ. ಜನ ಸಾಮಾನ್ಯರೇ ಹೇಳತೀದಾರೆ ಎಂದರು. ವಿದ್ಯಾನಿಧಿ,ಭಾಗ್ಯಲಕ್ಷ್ಮೀ ಇವುಗಳನ್ನೆಲ್ಲ ಕಾಂಗ್ರೆಸ್ ಮಾಡಿದೆಯಾ? ಸುಮ್ನೆ ವಿತಂಡವಾದ ಮಾಡಬಾರದು ಎಂದರು.