ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಬಳ್ಳಾರಿ ನಾಲಾ ಕಾಂಕ್ರೀಟಿಕರಣ ಕಾಮಗಾರಿಗೆ ಒಪ್ಪಿಗೆಯನ್ನು ಸೂಚಿಸಲಾಗಿದೆ. ಜನರು ಕಾಮಗಾರಿಗೆ ಸಹಕರಿಸಬೇಕೆಂದು ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.

ಇಂದು ನಡೆದ ಬುಡಾ ಸಭೆಯಲ್ಲಿ ಭಾಗಿಯಾದ ಬಳಿಕ ವಿಡ್ಹಿಯೋ ಹೇಳಿಕೆ ಮೂಲಕ ಮಾತನಾಡಿದ ಅವರು, ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಬಳ್ಳಾರಿ ನಾಲಾ ಕಾಂಕ್ರೀಟಿಕರಣ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೇ ಇಲ್ಲಿಯ ವರೆಗೂ ಅದು ಮಂಜೂರಾಗದೇ ವಿಳಂಬವಾಗಿದೆ. ಇದಕ್ಕೆ ಹೊಸ ಉಪಾಯವನ್ನು ಯೋಚಿಸಲು ಇಂದಿನ ಬುಡಾ ಸಭೆಯಲ್ಲಿ ಪ್ರಸ್ತಾವವನ್ನು ಇಡಲಾಗಿದೆ. ಕಾಮಗಾರಿಗೆ ಡಿ.ಪಿ.ಆರ್ ಸಿದ್ಧಗೊಳಿಸಲು ಬುಡಾ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಶೀಘ್ರದಲ್ಲೇ ಸರ್ವೆ ಸೇರಿದಂತೆ ಇನ್ನುಳಿದ ಕಾರ್ಯಗಳನ್ನು ಮಾಡಲಾಗುವುದು. ಇದಕ್ಕೆ ಇಲ್ಲಿನ ಜನರು ಸಹಕರಿಸಬೇಕು. ಈ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕಾಮಗಾರಿಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.