ಮಹಿಳಾ ಸಚಿವೆಯೊಬ್ಬರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯಬೇಕಾದರೇ, ಅದನ್ನು ರಾಜಕೀಯ ಬಳಿಸಿಕೊಳ್ಳುವ ಕೆಟ್ಟ ಪರಿಸ್ಥಿತಿಗೆ ಬಿಜೆಪಿಗೆ ಬರಬಾರದಾಗಿತ್ತು. ತಪ್ಪು ಮಾತುಗಳನ್ನಾಡುವುದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿಗರಿಗೆ ಶೋಭೆ ತರಲ್ಲ. ತಕ್ಷಣ ಇಂತಹ ಮಾತುಗಳನ್ನು ನಿಲ್ಲಿಸಬೇಕೆಂದು, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ತಿರುಗೇಟು ನೀಡಿದ್ದಾರೆ.
ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಗಳ ಮೇಲೆ ಅಪಾರ ಗೌರವವಿತ್ತು. ಆದರೇ ಯಾರೋ ಒಬ್ಬರ ಪ್ರಭಾವದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಪಘಾತದ ಪ್ರಕರಣದಲ್ಲಿ ಮಹಿಳಾ ಸಚಿವರೊಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಕೂಡ ಬಿಜೆಪಿ ರಾಜಕೀಯಕ್ಕೆ ಬಳಸುತ್ತಿದೆ. ಇಂತಹ ಕೆಟ್ಟ ಪರಿಸ್ಥಿತಿ ಬಿಜೆಪಿಗೆ ಬರಬಾರದಾಗಿತ್ತು. ತಮ್ಮ ಆಂತರೀಕ ಕಚ್ಚಾಟವನ್ನು ಮುಚ್ಚಿ ಹಾಕಲೂ ಈ ವಿಷಯವನ್ನು ಪ್ರಸ್ತಾಪಿಸಿ ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದರು. ಬೈಟ್
ಮೊದಲನೇಯದಾಗಿ ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದೇವು ಎಂದು ಹೇಳಿದ್ದು ತಪ್ಪು ಮಾಹಿತಿ. ನಾವು ಸರ್ಕಾರಿ ವಾಹನದಲ್ಲೇ ಪ್ರಯಾಣಿಸುತ್ತಿದ್ದೇವು. ಇದರಲ್ಲಿ ತಮ್ಮೊಡನೆ ಸರ್ಕಾರದಿಂದ ನೇಮಿಸಲಾದ ಗನ್ ಮ್ಯಾನ್ ಮತ್ತು ಚಾಲಕರಿದ್ದರು. ಸಂಕ್ರಾಂತಿ ಹಿನ್ನೆಲೆ ಬೆಳಿಗ್ಗೆ 11 ಗಂಟೆಗೆ ಕುಟುಂಬದೊಂದಿಗೆ ಪೂಜೆಗೆ ತೆರಳಬೇಕಾಗಿತ್ತು. ಸಮಯ ಹೆಚ್ಚಾಗಿದ್ದರಿಂದ ಎಸ್ಕಾರ್ಟಗೆ ತಿಳಿಸಿರಲಿಲ್ಲ. ಇದನ್ನು ಬೇರೆ ಬೇರೆಯಾಗಿ ಅರ್ಥೈಸಲಾಗುತ್ತಿದೆ. ಅವರ ಮಾತುಗಳು ಸತ್ಯಕ್ಕೆ ದೂರ. ಇಂತಹ ತಪ್ಪು ಮಾತುಗಳನ್ನಾಡುವುದು ನಾರಾಯಣಸ್ವಾಮಿಗಳು ಹಾಗೂ ಬಿಜೆಪಿಗೆ ಶೋಭೆ ತರುವುದಿಲ್ಲ. ತಕ್ಷಣ ಇಂತಹ ಮಾತುಗಳನ್ನು ನಿಲ್ಲಿಸಬೇಕೆಂದರು