ಶೈಕ್ಷಣಿಕ, ಸಾಮಾಜಿಕ, ರಾಜಕೀಯದಲ್ಲಿ ಗೊಲ್ಲ ಹಣಬರ ಸಮಾಜ ಒಗ್ಗಟ್ಟಾಗುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಗೊಲ್ಲ ಹಣಬರ ಸಮಾಜದ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ ಹೇಳಿದರು.
ಅವರು ಚಿಕ್ಕೋಡಿ ಪಟ್ಟಣದ ಮಹಾಲಕ್ಷ್ಮೀ ಹೊಟೇಲ್ ನ
ಸಭಾ ಭವನದಲ್ಲಿ ಗೊಲ್ಲ ಹಣಬರ ಸಮಾಜದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಮಾಜ ಒಗ್ಗಟ್ಟು ಪ್ರದರ್ಶನ ಮಾಡುವುದು ಸೂಕ್ತವಾಗಿದೆ. ಸಮಾಜಕ್ಕೆ ಸಿಗಬೇಕಾದ ಮೀಸಲಾತಿ ನ್ಯಾಯಯುತವಾಗಿ ಪಡೆಯಲು ಎಲ್ಲರೂ ಒಗ್ಗೂಡಬೇಕಾಗಿದೆ ಎಂದರು.
ಗೊಲ್ಲ ಹಣಬರ ಸಮಾಜ ಬಾಂದವರು ಬೆಳಗಾವಿ ಮತ್ತು ಚಿಕ್ಕೋಡಿ ಭಾಗದಲ್ಲಿ ಹೆಚ್ಚು ಇರುವುದರಿಂದ ಚಿಕ್ಕೋಡಿಯಲ್ಲಿ ಕೃಷ್ಣ ಯಾದಾವಾನಂದ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯವರನ್ನು ಆಹ್ವಾನಿಸಿ ಸಮಾಜದ ಬೇಡಿಕೆಗಳನ್ನು ಸರ್ಕಾರದ ಇಡೋಣ ಎಂದರು.
ಬಳಿಕ ಹಣಬರ ಸಮಾಜದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಠ್ಠಲ ಖೋತ ಮಾತನಾಡಿ ಚಿಕ್ಕೋಡಿಯಲ್ಲಿ ಗೊಲ್ಲ ಹಣಬರ ಸಮಾಜದ ರಾಜ್ಯಮಟ್ಟದ ಬೃಹತ್ ಸಮಾವೇಶ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಕೃಷ್ಣ ಯಾದಾವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ,ಡಿ.ಟಿ.ಶ್ರೀನಿವಾಸರ ನಾಯಕತ್ವವನ್ನು ಪ್ರತಿಯೊಂದು ಹಳ್ಳಿಗಳಿಗೆ ತೆರಳಿ ಜನಜಾಗೃತಿ ಮಾಡುತ್ತಿದೇವೆ.ಚಿಕ್ಕೋಡಿಯಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಯಶಸ್ವಿ ಮಾಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ವಸಂತ ಕರಕಾಯಿ, ಜಿಲ್ಲಾಧ್ಯಕ್ಷ ಶೀತಲ ಮುಂಡೆ, ಭರತ ಜೋಗಳೆ, ಸಚೀನ ಖೋತ, ರುದ್ರಪ್ಪ ಸಂಗಪ್ಪಗೋಳ, ಶಿವಲಿಂಗ ಪೂಜಾರಿ,ಪ್ರಕಾಶ ಕೋಕಣೆ,ಸುಧಾಕರ ಖಾಡ, ಅಪ್ಪಾಸಾಹೇಬ ನಾಯಿಕ, ವಿಠ್ಠಲ ಯಾದವ, ಸಂತೋಷ ಟವಳೆ, ಎಸ್.ಎಂ.ಚೌಗಲಾ,ಶೇಖರ ಮುಂಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.