Belagavi

ಹು-ಧಾ ಗೆ ಹಿಡಕಲ್ ನೀರು ನೀಡಿದ್ರೇ ಉಗ್ರ ಹೋರಾಟ…

Share

ಬೆಳಗಾವಿಯ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ಕೈಗಾರಿಕೆಗಳಿಗೆ ನೀರನ್ನು ನೀಡಿದರೇ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯೂ ಎಚ್ಚರಿಕೆಯನ್ನು ನೀಡಿದೆ. ಇಂದು ಈ ಕುರಿತಾದ ಮನವಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಬೆಳಗಾವಿ ಹಿಡಕಲ್ ಜಲಾಶಯದಿಂದ ನೀರನ್ನು ಹುಬ್ಬಳ್ಳಿ ಧಾರವಾಡಕ್ಕೆ ಕೈಗಾರಿಕಾ ಉದ್ದೇಶಕ್ಕಾಗಿ ನೀರನ್ನು ಒಯ್ಯುತ್ತಿದ್ದು ಈ ಭಾಗದ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ಹತ್ತಾರು ತಾಲೂಕುಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗುತ್ತದೆ. ಅದಕ್ಕೆ ಸಾಕಷ್ಟು ಬಾರಿ ಹೋರಾಟ ಕೂಡಾ ಮಾಡಿದ್ದು ನಮ್ಮ ಭಾಗದ ಜನರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಯಾವುದೇ ಕಾರಣಕ್ಕೂ ಈ ಕೈಗಾರಿಕೆಗಳಿಗೆ ಒಂದು ಹನಿ ನೀರನ್ನು ಕೊಡುವುದಿಲ್ಲ . ಪೈಪ್ ಲೈನ್ ಹಾಕಲಿಕ್ಕೆ ಯಾವ ರೈತರು ಕೂಡಾ ಅವಕಾಶ ಕೊಡುವುದಿಲ್ಲ ಕೂಡಲೇ ತಕ್ಷಣವೇ ಜಿಲ್ಲಾ ಉಸ್ತುವಾರಿಗಳು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಬೆಳಗಾವಿ ಪ್ರಾದೇಶಿಕಯುಕ್ತರಿಗೆ & ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗಳು ತಕ್ಷಣವೇ ಈ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಬರುವ ದಿನಮಾನಗಳಲ್ಲಿ ಕರ್ನಾಟಕದ ರಾಜ್ಯಾದ್ಯಂತ ರೈತ ಸಂಘಟನೆ ಹಸಿರು ಸೇನೆ ಸಾವಿರಾರು ಸಂಖ್ಯೆಯಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಚೂನಪ್ಪ ಪುಜಾರಿ ಎಚ್ಚರಿಕೆ ಯನ್ನು ನೀಡಿದರು.

ಈ ಸಂದರ್ಭದಲ್ಲಿ ಚೂನಪ್ಪ ಪೂಜಾರಿ ಸಂಜು ಹೂವನ್ನವರ್ ಕಿಶನ್ ನಂದಿ ಜಗದೀಶ್ ದೇವರೆಡ್ಡಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಲವಾರು ಕಾರ್ಯಕರ್ತರು ಭಾಗಿಯಾಗಿದ್ಧರು.

Tags:

error: Content is protected !!