Belagavi

ಬೆಳಗಾವಿ: ಫೈನಾನ್ಸನವರ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ!!!

Share

ಫೈನಾನ್ಸನವರ ಕಿರುಕುಳಕ್ಕೆ ಬಾವಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಯಮನಾಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದ ಸರೋಜಾ ಕಿರಬಿ(52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಫೈನಾನ್ಸ್ ನಲ್ಲಿ ಸಬ್ಸಿಡಿ ಅಂತಾ ಹೇಳಿ 2ಲಕ್ಷ 30ಸಾಲ ಕೊಡಿಸಿದ್ದ ಆರೋಪಿ ಹೊಳೆಪ್ಪ ದಡ್ಡಿ ಕೊಡಿಸಿದ ಅರ್ಧದಷ್ಟು ಸಾಲ ತನಗೆ ಕೊಟ್ಟರೆ ತಾನೇ ಸಾಲ ಕಟ್ಟುವುದಾಗಿ ಹೊಳಪ್ಪ ಹೇಳಿದ್ದನಂತೆ. ಆತನನ್ನು ನಂಬಿ ಸಾಲ ಪಡೆದು ಅರ್ಧದಷ್ಟು ಹಣ ಹೊಳೆಪ್ಪಗೆ ನೀಡಿದ್ದ ಸರೋಜಾ ಅರ್ಧ ಸಾಲ ಕಟ್ಟಿದ ಬಳಿಕ ಫೈನಾನ್ಸ್ ದಿಂದ ಪೂರ್ತಿ ಸಾಲ ಕಟ್ಟಲು ಸೂಚನೆ ನೀಡಿದ್ದಳು.
ಈ ವೇಳೆ ತಾನೂ ಹಣ ಕಟ್ಟುವುದಿಲ್ಲ ಸಬ್ಸಿಡಿಯಾಗಿ ಸಾಲ ಪಡೆದಿದ್ದೇನೆ ಎಂದಿದ್ದ ಸರೋಜಾ ಅವರು ತಾವು ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಕಟ್ಟಿ ಅಂತಾ ನಿತ್ಯ ಕಿರುಕುಳ ನೀಡುತ್ತಿದ್ದರು. ಸಾಲ ಕೊಡಿಸಿದ ಹೊಳೆಪ್ಪ ಕೂಡ ಸಾಲ ಕಟ್ಟಲ್ಲ ಅಂತಾ ಕೈ ಎತ್ತಿದ್ದ. ಈ ಎಲ್ಲ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌.
ಈ ಕುರಿತು ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಹೊಳೆಪ್ಪನ ವಿರುದ್ಧ ಕೇಸ್ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.
ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದಲ್ಲಾಳಿಯಿಂದ ವಂಚನೆ ಸಂಬಂಧ ಕಾಕತಿ, ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಾಗಿದ್ದು, ಜಿಲ್ಲಾಡಳಿತ ಸೂಚನೆ ಮೇರೆಗೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಮಾಳಮಾರುತಿ ಪೊಲೀಸರಿಂದ ಹೊಳೆಪ್ಪ ದಡ್ಡಿಯನ್ನ ವಾರದ ಹಿಂದೆಯೇ ಅರೇಸ್ಟ್ ಮಾಡಲಾಗಿದೆ.ಸಧ್ಯ ಹಿಂಡಲಗಾ ಜೈಲಿನಲ್ಲಿ ಇರೋ ಆರೋಪಿ ಹೊಳೆಪ್ಪ ದಡ್ಡಿ ಬೆಳಗಾವಿ, ಹುಕ್ಕೇರಿ ತಾಲೂಕಿನ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವಂಚಿಸಿರೋ ದಡ್ಡಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Tags:

error: Content is protected !!