Belagavi

ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದ ಬೆಳಗಾವಿಯ ಪತ್ರಕರ್ತರು

Share

ತುಮಕೂರಿನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪಡೆದ ಮತ್ತು ಮಾನ್ಯತಾ ಸಮಿತಯ ಸದಸ್ಯರಾಗಿ ಆಯ್ಕೆಯಾದ ಬೆಳಗಾವಿಯ ಪತ್ರಕರ್ತರನ್ನು ಬೆಳಗಾವಿಯ ವಾರ್ತಾ ಇಲಾಖೆ ಮತ್ತು ಬೆಳಗಾವಿಯ ಪತ್ರಕರ್ತರ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.

ತುಮಕೂರಿನಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪಡೆದ ಬೆಳಗಾವಿಯ ಪತ್ರಕರ್ತರನ್ನು ಮತ್ತು ಮಾನ್ಯತಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಸದಸ್ಯರನ್ನು ಸತ್ಕರಿಸುವ ಸಮಾರಂಭವನ್ನು ಬೆಳಗಾವಿಯ ವಾರ್ತಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವೇದಿಕೆ ಮೇಲೆ ವಾರ್ತಾ ಮತ್ತು ಪ್ರಸಾರ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ ಸೇರಿದಂತೆ ಪ್ರಶಸ್ತಿ ವಿಜೇತರು ಉಪಸ್ಥಿತರಿದ್ದರು.
ಗಣ್ಯರ ಹಸ್ತದಿಂದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರಾದ ಹೃಷಿಕೇಶ ಬಹದ್ದೂರ ದೇಸಾಯಿ, ಕೀರ್ತಿಶೇಖರ ಕಾಸರಗೋಡು,ನೌಶಾದ ಬಿಜಾಪುರ, ಕೀರ್ತಿಶೇಖರ ಕಾಸರಗೋಡು ಮತ್ತು ಮಾನ್ಯತಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಕೀರ್ತಿಶೇಖರ ಕಾಸರಗೋಡು, ಶ್ರೀಕಾಂತ ಕುಬಕಡ್ಡಿ ಮತ್ತು ಪುಂಡಲೀಕ ಬಾಳೋಜಿ ಅವರನ್ನು ಸತ್ಕರಿಸಲಾಯಿತು.

ರವಿ ಉಪ್ಪಾರ ಅವರು ಎಲ್ಲರನ್ನು ಸ್ವಾಗತಿಸಿದರು. ಮೆಹಬೂಬ್ ಮಕಾನದಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಸಂತೋಷ ಚಿಣಿಗುಣಿ, ಶ್ರೀಶೈಲ್ ಮಠದ, ಮಲ್ಲಿಕಾರ್ಜುನ ಮುಗಳಿ, ಅಡಿವೆಪ್ಪ ಪಾಟೀಲ್, ಗಂಗಾಧರ ಉಮೇಶ್, ಚಂದ್ರು ಸುಗಂಧಿ, ಮೈಲಾರಿ, ಮುನ್ನಾ ಬಾಗವಾನ್, ವಿನಾಯಕ ಮಠಪತಿ, ಸುನೀತಾ ದೇಸಾಯಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!